ವಿವಿಧ ಪಂಗಡಗಳಿಗೆ ಸಮಾನಾವಕಾಶಗಳನ್ನು ಒದಗಿಸುವ ಖಚಿತತೆಗಾಗಿ, ಸಮಾನಾವಕಾಶಗಳ ಆಯೋಗವೊಂದನ್ನು ರೂಪಿಸುವ ಕೇಂದ್ರ ಸರಕಾರದ ಭರವಸೆ ಸದ್ಯವೇ ಕಾರ್ಯರೂಪಕ್ಕೆ ಬರಲಿದ್ದು, ಈ ಜವಾಬ್ದಾರಿ ವಹಿಸಿರುವ ಸಮಿತಿಯು ಫೆ.28ರಂದು ತನ್ನ ವರದಿಯನ್ನು ಒಪ್ಪಿಸುವ ಸಂಭವವಿದೆ.
ಸಾಚಾರ್ ಸಮಿತಿಯ ಶಿಫಾರಸುಗಳ ತ್ವರಿತ ಜಾರಿಗಾಗಿ ರೂಪಿಸಲಾಗಿರುವ ಸಮಿತಿಯ ಅವಧಿಯು ಫೆ.29ರಂದು ಮುಕ್ತಾಯಗೊಳ್ಳಲಿದ್ದು ಇದಕ್ಕೆ ಮುಂಚಿತವಾಗಿ ಅದು ವರದಿ ಒಪ್ಪಿಸಲಿದೆ. ವರದಿಯು ಸಿದ್ಧವಾಗಿರುವ ಕಾರಣ ಅವಧಿ ವಿಸ್ತರಣೆಯನ್ನು ಕೋರಲು ಇಚ್ಛಿಸಿಲ್ಲ ಎಂಬುದಾಗಿ ಎನ್.ಆರ್.ಎಂ ಮೆನನ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಆಯೋಗದ ಸ್ಥಾಪನೆಗಾಗಿ ಶಿಫಾರಸ್ಸುಗಳು ಮತ್ತು ಸಂಸತ್ತಿನಲ್ಲಿ ಮಂಡಿಸಲಿರುವ 'ಸಮಾನ ಅವಕಾಶಗಳ ಮಸೂದೆ'ಯ ಕರಡು ಪ್ರತಿಯನ್ನೂ ಸಮಿತಿ ಸಲ್ಲಿಸಲಿದೆ.
ಈ ಆಯೋಗವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾದರಿಯಲ್ಲಿ ಸ್ಥಾಪಿಸಲಾಗುತ್ತಿದೆ, ಆದರೆ, ಸ್ಪಷ್ಟ ಪುರಾವೆಯ ಆದಾದಲ್ಲಿ ಇದರ ಲಕ್ಷಣಗಳು ವ್ಯತ್ಯಸ್ಥವಾಗಲಿವೆ ಎಂದು ಮೆನನ್ ತಿಳಿಸಿದ್ದಾರೆ. ಶಿಕ್ಷಣ, ಉದ್ಯೋಗ ಹಾಗೂ ನೀತಿ ನಿರ್ಧಾರಗಳಿಗೆ ಸಂಬಂಧ ಪಟ್ಟ ಪ್ರಕರಣಗಳ ಕುರಿತು ಆಯೋಗವು ವ್ಯವಹರಿಸಲಿದೆ.
|