ನ್ಯಾಯಾಂಗದ ಕಾರ್ಯನಿರ್ವಹಣೆಯನ್ನು ಮತ್ತೊಮ್ಮೆ ಟೀಕಿಸಿರುವ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ, ರಾಷ್ಟ್ರಾಡಳಿತದ 'ಗುರುತರವಾದ ಜವಾಬ್ದಾರಿ'ಯನ್ನೇನಾದರೂ ಸ್ವಯಂ ವಹಿಸಿಕೊಂಡಲ್ಲಿ 'ಗಂಭೀರ ಪರಿಣಾಮ'ಗಳುಂಟಾಗಲಿವೆ ಎಂಬ ಎಚ್ಚರಿಕೆ ನೀಡಿದ್ದಾರೆ.
ನ್ಯಾಯಾಂಗವು ಶಾಸಕಾಂಗದ ಮೇಲೆ ಹಿರಿಮೆ ಸಾಧಿಸಬಾರದು ಎಂದು ಹೇಳಿದ ಅವರು, ನ್ಯಾಯಾಂಗವು ಶಾಸಕಾಂಗದ ವಿಷಯಗಳಲ್ಲಿ ಹೆಜ್ಜೆ ಇರಿಸಬಾರದು ಮತ್ತು ಪ್ರಜಾಪ್ರಭುತ್ವದ ಇತರ ಅಂಗಗಳಿಗೆ ಮೀಸಲಿರುವ ಕ್ಷೇತ್ರಗಳಲ್ಲಿ ಅತಿಕ್ರಮಣಮಾಡಬಾರದು ಎಂದು ಹೇಳಿದ್ದಾರೆ.
ಇಲ್ಲಿನ ಹೈಕೋರ್ಟ್ ವಕೀಲರ ಸಂಘದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಚಟರ್ಜಿ, ಭಾರತದ ಸಂವಿಧಾನವು ಸಾರ್ವಜನಿಕ ವ್ಯವಹಾರಗಳ ಕುರಿತಂತೆ ಶಾಸಕಾಂಗದ ಜವಾಬ್ದಾರಿಯನ್ನು ಸ್ಪಷ್ಟವಾಗಿ ತಿಳಿಸಿದ್ದು, ಇದು ಜನರಿಗೆ ಉತ್ತರದಾಯಿಯಾಗಿರಬೇಕು ಎಂದು ಹೇಳಿದರು.
ನ್ಯಾಯತೀರ್ಪಿನಲ್ಲಿನ ವಿಳಂಬದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಚಟರ್ಜಿ ಇದು ರಾಷ್ಟ್ರದ ಅಂತಃಸಾಕ್ಷಿಗೆ ಧಕ್ಕೆಯುಂಟುಮಾಡುತ್ತಿದೆ ಎಂದು ನುಡಿದರು.
|