ಕೇಂದ್ರ ಸರಕಾರ ಹೊರಡಿಸಿರುವ ಕ್ಷೇತ್ರಗಳ ಮರುವಿಂಗಡಣೆ ಅಧಿಸೂಚನೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮಂಗಳವಾರ ಅಂಕಿತ ಹಾಕಿದ್ದಾರೆ.
24 ರಾಷ್ಟ್ರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಕ್ಷೇತ್ರಗಳನ್ನು ಬದಲಿಸಲಿರುವ ಈ ಅಧಿಸೂಚನೆಗೆ ರಾಷ್ಟ್ರಪತಿಗಳು ಮಂಗಳವಾರ ಅನುಮತಿ ನೀಡಿರುವುದಾಗಿ ರಾಷ್ಟ್ರಪತಿ ಭವನದ ವಕ್ತಾರರು ತಿಳಿಸಿದ್ದಾರೆ.
ಈಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯದಲ್ಲಿ ಚುನಾವಣಾ ಪ್ರಕ್ರಿಯೆಗಳು ಇದೀಗಾಗಲೇ ಆರಂಭವಾಗಿರುವ ಕಾರಣ ಆ ರಾಜ್ಯಗಳಿಗೆ ಇದು ಅನ್ವಯವಾಗುವುದಿಲ್ಲ. ಅಲ್ಲದೆ, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್ ಮತ್ತು ಜಾರ್ಖಂಡ್‌ಗಳಿಗೂ ಇದು ಅನ್ವಯವಾಗುವುದಿಲ್ಲ.
ಕ್ಷೇತ್ರ ಮರುವಿಂಗಡಣೆಯ ಬಳಿಕ ರಾಷ್ಟ್ರದ ರಾಜಕೀಯ ಭೂಪಟದಲ್ಲಿ ಭಾರೀ ಬದಲಾವಣೆಗಳಾಗಲಿವೆ. ಘಟಾನುಘಟಿ ರಾಜಕೀಯ ನಾಯಕರು ತಾವು ಪೋಷಿಸಿಕೊಂಡು ಬಂದಿರುವ ಕ್ಷೇತ್ರಗಳನ್ನು ಕಳೆದುಕೊಳ್ಳಲಿದ್ದಾರೆ. ಅಂತೆಯೆ, ಕೆಲವು ಹೊಸ ಕ್ಷೇತ್ರಗಳು ನಿರ್ಮಾಣವಾಗಲಿವೆ.
|