ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಲಾಯಂ ಪ್ರಧಾನಿ ಅಭ್ಯರ್ಥಿ: ವಾಮರ ಅಸಮಾಧಾನ
ಯುಎನ್‌ಪಿಎ ಮೈತ್ರಿ ಕೂಟದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರನ್ನು ಬಿಂಬಿಸಿರುವುದಕ್ಕೆ ಎಡಪಕ್ಷಗಳು ಅಸಮಾಧಾನ ಸೂಚಿಸಿವೆ. ಇದಲ್ಲದೆ ಅವಧಿ ಪೂರ್ಣ ಚುನಾವಣೆಗೆ ಕಾಂಗ್ರೆಸ್ ಆತುರ ತೋರುತ್ತಿರುವುದರ ವಿರುದ್ಧ ಎಚ್ಚರಿಸಿರುವ ಅದು, ಇದು ರಾಜಕೀಯ ಹರಾ-ಕಿರಿಯಾದೀತು ಎಂದು ಹೇಳಿದೆ.

ತೃತೀಯ ರಂಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿಸಬೇಕೇ, ಬೇಡವೇ ಎಂಬ ವಿಚಾರದಲ್ಲಿ ಎಡಪಕ್ಷಗಳೊಳಗೆ ಭಿನ್ನಾಭಿಪ್ರಾಯಗಳು ಮೂಡಿವೆ.

'ಏಕಸ್ವಾಮ್ಯ ಹಾಗೂ ಜಮೀನ್ದಾರರ ಪಕ್ಷ' ಎಂದು ಕಾಂಗ್ರೆಸನ್ನು ಸಿಪಿಐ(ಎಂ) ಜರೆದಿದೆ. ಆದರೆ, ಬಿಜೆಪಿಯು ಅಧಿಕಾರಕ್ಕೆ ಬರುವುದನ್ನು ತಡೆಯಲು ಕಾಂಗ್ರೆಸನ್ನು ಜಾತ್ಯತೀತ ಶಿಬಿರದಿಂದ ಹೊರಗಿರಿಸಬಾರದು ಎಂದು ಹೇಳಿದೆ.
ಮತ್ತಷ್ಟು
ಪಣಜಿ ಗಲಭೆ: ಮೇಯರ್ ಬಂಧನ
ಕ್ಷೇತ್ರ ಪುನರ್ವಿಂಗಡಣೆ: ರಾಷ್ಚ್ರಪತಿ ಅಂಕಿತ
ನ್ಯಾಯಾಂಗದ ಮೇಲೆ ಮತ್ತೊಮ್ಮೆ ಹರಿಹಾಯ್ದ ಚಟರ್ಜಿ
ಸದ್ಯವೇ ಸಮಾನಾವಕಾಶ ಆಯೋಗ
ನಕ್ಸಲರು: ಒರಿಸ್ಸಾ ಪೊಲೀಸರಿಂದ ಶಸ್ತ್ರಾಸ್ತ್ರ ಪತ್ತೆ
ಶಾಸಕನಿಗೆ 'ಸರಿಯಾದ' ಶಿಕ್ಷೆ ನೀಡಿದ ನ್ಯಾಯಾಲಯ