ಸಮಾಜದಲ್ಲಿ ಮಹಿಳಾ ಸಬಲೀಕರಣ ಹಾಗೂ ಅಭಿವೃದ್ಧಿಗೆ ಪ್ರಾಧಾನ್ಯ ನೀಡಬೇಕೆಂದು ಹೇಳಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಂಬರುವ ಬಜೆಟ್‌ನಲ್ಲಿ ಮಹಿಳೆಯರು ಹಾಗೂ ರೈತರಿಗೆ ಅನುಕೂಲಕರ ಪ್ರಸ್ತಾಪಗಳಿರಬಹುದು ಎಂಬ ನಿರೀಕ್ಷೆ ಹೊಂದಿರುವುದಾಗಿ ಹೇಳಿದ್ದಾರೆ.
ಬ್ಯಾಂಕ್ ಆಫ್ ಬರೋಡಾದ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸೋನಿಯಾ, ಮಹಿಳೆಯರ ಕೊಡುಗೆ ಇಲ್ಲದೆ ಯಾವುದೇ ಸಮಾಜ ಪ್ರಗತಿ ಮತ್ತು ಅಭ್ಯುದಯ ಹೊಂದದು ಮತ್ತು ಮಹಿಳೆಯರು ಸ್ವಾಲಂಬಿಗಳಾಗದೆ, ಯಾವುದೇ ಆರ್ಥಿಕತೆ ಸ್ವಾಲಂಬಿಯಾಗದು ಎಂದು ನುಡಿದರು.
ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿರುವ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರೂ ಕೂಡ ಸಮಾರಂಭದಲ್ಲಿ ಭಾಗವಸಿದ್ದರು.
|