ಜೋಧಾ ಅಕ್ಬರ್ ಸಿನಿಮಾ ಪ್ರದರ್ಶನ ನಡೆಯುತ್ತಿದ್ದ ಮುಂಬಯಿ ಸಮೀಪದ ಪನ್ವೇಲ್ ನಗರದ ಚಿತ್ರಮಂದಿರವೊಂದರಲ್ಲಿ ಬಾಂಬ್ ಸ್ಫೋಟ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಯಾವುದೇ ಅವಘಡ ಸಂಭವಿಸಿರುವ ವರದಿಯಾಗಿಲ್ಲ.
ಮುಂಬಯಿಯಿಂದ 100 ಕಿ.ಮೀ.ದೂರದಲ್ಲಿರುವ ಥಾಣೆ ಜಿಲ್ಲೆಯ ಪಾನ್ವೆಲ್‌ನಲ್ಲಿರುವ ಸಿನಿರಾಜ್ ಚಿತ್ರಮಂದಿರದಲ್ಲಿ ಮಧ್ಯಾಹ್ನದ ಪ್ರದರ್ಶನ ನಡೆಯುತ್ತಿತ್ತು. ಈ ಪ್ರದರ್ಶನವು ಇನ್ನೇನು ಮುಗಿಯಬೇಕೆನ್ನುವಷ್ಟರಲ್ಲಿ ಬಾಂಬ್ ಸ್ಫೋಟಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಅವಘಡಗಳು ಈ ವರೆಗೆ ವರದಿಯಾಗಿಲ್ಲ. ಮತ್ತು ಸ್ಫೋಟದ ಕುರಿತಾಗಿ ತನಿಖೆಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ, ಈ ಚಿತ್ರಮಂದಿರದ ಸಮಾಪವಿರುವ ಇನ್ನೊಂದು ಚಿತ್ರಮಂದಿರದಲ್ಲಿ ಬಾಂಬ್ ನಿಷ್ಕ್ರಿಯ ದಳದವರು ಮತ್ತು ಶ್ವಾನ ದಳದವರಿಂದ ತಪಾಸಣೆಯನ್ನು ನಡೆಸಲಾಯಿತು. ಅಲ್ಲದೆ ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
|