ಭಾರತವು ದೇಶೀಯವಾಗಿ ನಿರ್ಮಿಸಿರುವ ಚಾಲಕ ರಹಿತ ಗುರಿಯ ವಿಮಾನ ಲಕ್ಷ್ಯಾವನ್ನು ಚಂಡೀಪುರದ ಸಮಗ್ರ ಪರೀಕ್ಷಾ ವಲಯದಿಂದ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ಡಿಜಿಟಲ್ ನಿಯಂತ್ರಿತ ಸುಧಾರಿತ ಇಂಜಿನ್‌ನಲ್ಲಿ ಅಳವಡಿಸಿರುವ ಲಕ್ಷ್ಯಾವನ್ನು ಬಾಲ್ಸೂರ್‌ನ ವೈಮಾನಿಕ ಅಭಿವೃದ್ಧಿ ನೆಲೆಯಲ್ಲಿ ತಯಾರಿಸಲಾಗಿದೆ. ಯುದ್ಧರಂಗದ ವೈಮಾನಿಕ ಬೇಹುಗಾರಿಕೆ ಮತ್ತು ಗುರಿ ಅರ್ಜನೆಗಾಗಿ ಈ ವಿಮಾನವನ್ನು ಅಭಿವೃದ್ಧಿ ಪಡಿಸಲಾಗಿದೆ.
ಆರು ಅಡಿ ಉದ್ದದ ಮೈಕ್ರೋ ಹಗುರ ವಿಮಾನದ ಹಾರಾಟ ಅವಧಿಯು 30-35 ನಿಮಿಷಗಳು. ಆಕಾಶದಲ್ಲಿ ಅದು ತನ್ನ ಕಾರ್ಯನಿರ್ವಹಿಸಿದ ಬಳಿಕ ಪ್ಯಾರಾಚೂಟ್ ಸಹಾಯದೊಂದಿಗೆ ಭೂಮಿಗೆ ಮರಳುತ್ತದೆ.
ಲಕ್ಷ್ಯಾವನ್ನು ಅದರ ಎಂಜಿನ್‌ನ ಸರಾಗಕ್ಕಾಗಿ ಮತ್ತು ಅವಧಿಯ ವಿಸ್ತರಣೆಗಾಗಿ ಈ ಹಿಂದೆ ಹಲವು ಬಾರಿ ಪರೀಕ್ಷಿಸಲಾಗಿದೆ. ಬುಧವಾರದ ಹಾರಾಟವನ್ನು ಪರೀಕ್ಷಾ ವಲಯದ ಎರಡನೇ ಸಂಕೀರ್ಣದಿಂದ ಪರೀಕ್ಷಿಸಲಾಗಿದೆ ಎಂದು ಹೇಳಿರುವ ರಕ್ಷಣಾ ಮೂಲಗಳು ಇದು ಮಾಮೂಲಿ ಪರೀಕ್ಷೆಯಾಗಿದೆ ಎಂದು ತಿಳಿಸಿದ್ದಾರೆ.
|