ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕ್ಸಲ್ ದಾಳಿ: ಮೃತರ ಸಂಖ್ಯೆ 16ಕ್ಕೇರಿಕೆ
ನಯಾಗರದಲ್ಲಿ ಫೆ.15ರಂದು ನಕ್ಸಲರು ನಡೆಸಿರುವ ದಾಳಿಯಲ್ಲಿ ಗಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ಪೊಲೀಸೊಬ್ಬರು ಮೃತರಾಗಿದ್ದು, ದಾಳಿಯಲ್ಲಿ ಮೃತರಾದವರ ಸಂಖ್ಯೆ 16ಕ್ಕೇರಿದೆ. ಏತನ್ಮಧ್ಯೆ, ಮಾವೋವಾದಿ ಉಗ್ರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆ ತೀವ್ರಗೊಂಡಿದ್ದು ಮತ್ತಿಬ್ಬರು ನಕ್ಸಲರನ್ನು ಬಂಧಿಸಲಾಗಿದೆ.

ಕಂದಮಲ್ ಮತ್ತು ಗಂಜಾಮ್‌ ಗಡಿಯ ಕಾಡಿನಲ್ಲಿ ಅಡಗಿರುವ ನಕ್ಸಲರ ಪತ್ತೆಗೆ ಭಾರೀ ಕಾರ್ಯಾಚರಣೆ ಹಮ್ಮಿಕೊಂಡಿರುವ ಸರಕಾರವು ಶ್ವಾನದಳ ಮತ್ತು ವಾಯುಪಡೆಯ ಹೆಲಿಕಾಫ್ಟರ್‌ಗಳನ್ನು ಈ ಕಾರ್ಯಕ್ಕಾಗಿ ಬಳಸಿದೆ. ಗಂಜಾಮ್ ಪೊಲೀಸ್ ವರಿಷ್ಠಾಧಿಕಾರಿ ದೇವದತ್ತ ಸಿಂಗ್ ಅವರು ಕೂಂಬಿಂಗ್ ಕಾರ್ಯಚರಣೆಯ ಮೇಲ್ವೀಚಾರಣೆ ನಡೆಸುತ್ತಿದ್ದಾರೆ.

ಪೊಲೀಸರ ಪತ್ತೆ ಕಾರ್ಯಕ್ಕೆ ಹೆದರಿರುವ ನಕ್ಸಲರು ಸಣ್ಣಸಣ್ಣ ಗುಂಪುಗಳಾಗಿ ಚದುರಿದ್ದು, ವಿವಿಧ ಗ್ರಾಮಗಳಲ್ಲಿ ಮತ್ತು ದಟ್ಟ ಕಾಡುಗಳಲ್ಲಿ ಅಡಗಿದ್ದು, ಚತ್ತೀಸ್‌ಗಢ ಹಾಗೂ ಆಂಧ್ರಪ್ರದೇಶಗಳಿಗೆ ಪರಾರಿಯಾಗಲು ಪ್ರಯತ್ನಿಸಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮತ್ತಷ್ಟು
ಜಗತ್ತು ಕುಡಿವ ನೀರಿನ ಬಿಕ್ಕಟ್ಟೆದುರಿಸಲಿದೆ'
ಚಾಲಕ ರಹಿತ 'ಲಕ್ಷ್ಯಾ'ದ ಯಶಸ್ವೀ ಹಾರಾಟ
ಜೋಧಾ ಅಕ್ಬರ್ ಪ್ರದರ್ಶನದ ವೇಳೆ ಬಾಂಬ್ ಸ್ಫೋಟ
ಬಡೆಟ್‌ನಲ್ಲಿ ಮಹಿಳೆಯರಿಗೆ ಆದ್ಯತೆ: ಸೋನಿಯಾ ನಿರೀಕ್ಷೆ
ಮೇಘಾಲಯದಲ್ಲಿದ್ದಾರೆ ಹಿಟ್ಲರ್, ರೋಮಿಯೋ, ನ್ಯೂಟನ್ !
ಮುಲಾಯಂ ಪ್ರಧಾನಿ ಅಭ್ಯರ್ಥಿ: ವಾಮರ ಅಸಮಾಧಾನ