ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌ಗೆ ನಟ್ವರ್ ಸಿಂಗ್ ವಿದಾಯ
PIB
ಸುಮಾರು ಎರಡು ದಶಕಗಳಿಗಿಂತಲೂ ಹೆಚ್ಚುಕಾಲ ಕಾಂಗ್ರೆಸ್ ನಂಟು ಹೊಂದಿದ್ದ ಮಾಜಿ ವಿದೇಶಾಂಗ ಸಚಿವ ನಟ್ವರ್ ಸಿಂಗ್ ಕಾಂಗ್ರೆಸ್‌ಗೆ ವಿದಾಯ ಹೇಳಿದ್ದು, ಅವರುಸ ತನ್ನ ರಾಜ್ಯ ಸಭಾ ಸದಸ್ಯತ್ವಕ್ಕೂ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ತಾನು ರಾಜೀನಾಮೆ ನೀಡಿದ್ದೇನೆಂದು ಹೇಳಿರುವ ಅವರು ಈ ಕುರಿತು ರಾಜೀನಾಮೆ ಪತ್ರವನ್ನು ಬುಧವಾರ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಕಳುಹಿಸಿರುವುದಾಗಿ ತಿಳಿಸಿದರು.
ಒಂದು ಕಾಲದಲ್ಲಿ ಸೋನಿಯಾ ಗಾಂಧಿಯವರ ನಿಕಟವರ್ತಿಯಾಗಿದ್ದ ನಟ್ವರ್ ಸಿಂಗ್, ಇರಾಕಿನ ಆಹಾರಕ್ಕಾಗಿ ತೈಲ ಪ್ರಕರಣದ ಬಳಿಕ ಸಂಬಂಧ ಹಳಸಿತ್ತು. ಬಳಿಕ ಕಾಂಗ್ರೆಸ್, ಪ್ರಸ್ತುತ ಹಗರಣದಲ್ಲಿ ನಟ್ವರ್ ಸಿಲುಕಿದ್ದಾರೆ ಎಂಬ ಆಪಾದನೆಯ ಮೇಲೆ ಅವರನ್ನು ಆಗಸ್ಟ್ 2006ರಲ್ಲಿ ಪಕ್ಷದಿಂದ ಅಮಾನತ್ತುಪಡಿಸಿತ್ತು.

ಎಪ್ರಿಲ್ ತಿಂಗಳಲ್ಲಿ ಅವರ ರಾಜ್ಯಸಭಾ ಅವಧಿಯು ಮುಗಿಯಲಿದೆ. ರಾಜ್ಯಸಭಾ ಸ್ಥಾನಕ್ಕೂ ರಾಜೀನಾಮೆ ನೀಡುವಿರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ತಾನು ರಾಜೀನಾಮೆ ನೀಡಲೂ ಬಹುದು ಎಂದು ನುಡಿದರು.
ಜೈಪುರದಲ್ಲಿ ಕಳೆದವಾರ ನಡೆದ ರಾಜಸ್ಥಾನ ಮುಖ್ಯಮಂತ್ರಿ ವಸುಂಧರೇ ರಾಜ್ ಅರಸ್ ಭಾಗವಹಿಸಿದ್ದ ಬಿಜೆಪಿ ಸಮಾವೇಶವೊಂದರಲ್ಲಿ ಪಾಲ್ಗೊಂಡಿದ್ದ ಅವರು ಕಾಂಗ್ರೆಸ್ ತೊರೆಯುವ ನಿರ್ಧಾರ ಪ್ರಕಟಿಸಿದ್ದರು.

ಬಿಜೆಪಿಗೆ ಸೇರಲಿದ್ದೀರೆ ಎಂಬ ಪ್ರಶ್ನೆಗೆ ಸ್ಪಷ್ಟಉತ್ತರ ನೀಡದ ಅವರು ನಿಮಗೆ ಸದ್ಯವೆ ಗೊತ್ತಾಗಲಿದೆ, ಕಾದುನೋಡಿ ಎಂದಷ್ಟೆ ಹೇಳಿದರು. ರಾಜ್ಯಸಭೆಯಿಂದ ನಿಮ್ಮನ್ನು ಅನರ್ಹಗೊಳಿಸಲು ಕ್ರಮಕೈಗೊಳ್ಳಬಹುದೆ ಎಂಬ ಇನ್ನೊಂದು ಪ್ರಶ್ನೆ ಎದುರಿಸಿದ ಸಿಂಗ್, ನನ್ನನ್ನು ಅನರ್ಹಗೊಳಿಸುವುದು ಅಷ್ಟುಸುಲಭವಲ್ಲ ಎಂದು ಪ್ರತಿಕ್ರಿಯಿಸಿದರು.

ಆಹಾರಕ್ಕಾಗಿ ತೈಲ ಹಗರಣದಲ್ಲಿ ಸಿಂಗ್ ಪುತ್ರ ಜಗಜೀತ್ ಅವರ ಹೆಸರೂ ಕೇಳಿಬಂದಿದ್ದು, ಇವರನ್ನು ಇದೀಗಾಗಲೆ ಕಾಂಗ್ರೆಸ್ ಉಚ್ಚಾಟಿಸಿದೆ.
ಮತ್ತಷ್ಟು
ಕ್ರಿಕೆಟಿಗರ ಹರಾಜು ನಾಚಿಕೆಗೇಡು: ಶರದ್
ಲಾಲೂಗೆ 'ಪೂಜೆ' ಮಾಡಿದ ಠಾಕ್ರೆ
ನಕ್ಸಲ್ ದಾಳಿ: ಮೃತರ ಸಂಖ್ಯೆ 16ಕ್ಕೇರಿಕೆ
ಜಗತ್ತು ಕುಡಿವ ನೀರಿನ ಬಿಕ್ಕಟ್ಟೆದುರಿಸಲಿದೆ'
ಚಾಲಕ ರಹಿತ 'ಲಕ್ಷ್ಯಾ'ದ ಯಶಸ್ವೀ ಹಾರಾಟ
ಜೋಧಾ ಅಕ್ಬರ್ ಪ್ರದರ್ಶನದ ವೇಳೆ ಬಾಂಬ್ ಸ್ಫೋಟ