ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಉಗ್ರರ ಸಂಚನ್ನು ಬಯಲು ಮಾಡಿರುವ ಭದ್ರತಾ ಪಡೆಗಳು ಕಾಶ್ಮೀರದ ಕೇರನ್ ಪ್ರಾಂತ್ಯದಲ್ಲಿ ಇಬ್ಬರು ಉಗ್ರರನ್ನು ಕೊಂದು ಹಾಕಿದ್ದಾರೆ.
ಉಗ್ರರ ತಂಡವು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಿಂದ ಕತ್ತಲೆಯಲ್ಲಿ ಗಡಿಯಲ್ಲಿ ನುಸುಳಲು ಯತ್ನಿಸುವಾಗ ಗಡಿನಿಯಂತ್ರಣ ರೇಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಕ್ಷಣಾ ಪಡೆಗಳ ಗಮನಕ್ಕೆ ಬಂದಿತ್ತು.
ಶರಣಾಗುವಂತೆ ಉಗ್ರರಿಗೆ ತಿಳಿಸಿದಾಗ ಅವರು ಗುಂಡು ಹಾರಿಸಿದ್ದು, ಪ್ರತಿಯಾಗಿ ಭದ್ರತಾಪಡೆಗಳೂ ಗುಂಡುಹಾರಿಸಲಾರಂಭಿಸಿದರು. ಈ ವೇಳೆ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
|