ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಶಿವಸೇನೆಯು ಫೆ.26ರಂದು ರಾಜ್ಯವ್ಯಾಪಿ ಮುಷ್ಕರ ಹಮ್ಮಿಕೊಂಡಿದೆ.
ಕೃಷಿ ಸಾಲದ ಹೊರೆ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೇನೆಯು ಮುಷ್ಕರಕ್ಕೆ ಮುಂದಾಗಿದೆ.
ಮಹಾರಾಷ್ಟ್ರದ ಅದರಲ್ಲಿಯೂ ವಿದರ್ಭ ಮತ್ತು ಮರಾಠವಾಡಾದ ರೈತರು ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಉಳಿಸುವ ಒಂದೇ ದಾರಿ ಎಂದರೆ ಅವರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿದೆ ಎಂದು ಸೇನಾ ವಕ್ತಾರ ಸುಭಾಷ್ ದೇಸಾಯ್ ಶುಕ್ರವಾರ ಹೇಳಿದ್ದಾರೆ.
|