ಜಮ್ಮುವಿನ ದೋಡಾ ಜಿಲ್ಲೆಯ ಭದೇರ್ವಾದಲ್ಲಿನ ಅಡಗು ತಾಣವೊಂದನ್ನು ಬೇಧಿಸಿರುವ ಸಿಆರ್‌ಪಿಎಫ್ ಪಡೆ, ನಾಲ್ಕು ಕೆಜಿ ಆರ್‌ಡಿಎಕ್ಸ್, ಎರಡು ಗ್ರೆನೇಡುಗಳು ಮತ್ತು ಡಿಟೊನೇಟರ್‌ಗಳನ್ನು ಗುರವಾರ ರಾತ್ರಿ ವಶಪಡಿಸಿಕೊಂಡಿದೆ.
ಯುಪಿಎ ಅಧ್ಯಕ್ಷೆ ಸೊನಿಯಾ ಗಾಂಧಿ ಹಾಗೂ ಗೃಹ ಸಚಿವ ಶಿವರಾಜ್ ಪಾಟೀಲ್ ಅವರು ಶುಕ್ರವಾರ ಸಭೆ ನಡೆಸಲುದ್ದೇಶಿಸಿರುವ ಸ್ಥಳದಿಂದ ಸುಮಾರು 800 ಮೀಟರ್ ದೂರದ ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಇದು ಸೋನಿಯಾ ಹತ್ಯಾ ಸಂಚು ಇರಬಹುದೆಂದು ಶಂಕಿಸಲಾಗಿದೆ.
ಕಟ್ಟರ್‌ವಾದಿ ಇಸ್ಲಾಮಿಕ್ ಸಂಘಟನೆ ಲಷ್ಕರೆ-ಇ-ತೋಯ್ಬಾದ ಉಗ್ರರರೆಂದು ಶಂಕಿಸಲಾಗಿರುವ ಐದು ಮಂದಿ ಪರಾರಿಯಾಗಿದ್ದಾರೆ. ಮನೆಯ ಇಬ್ಬರು ಸದಸ್ಯರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಈ ತಿಂಗಳ ಆದಿಯಲ್ಲಿನ ಹಿಮಪಾತದಿಂದ ಸೈನಿಕರು ಸೇರಿದಂತೆ ಸುಮಾರು 30 ಮಂದಿ ಪ್ರಾಣಕಳೆದುಕೊಂಡಿರುವ ಪ್ರದೇಶಕ್ಕೆ ಸೋನಿಯಾ ಭೇಟಿ ನೀಡುತ್ತಿದ್ದಾರೆ.
|