ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೀರ್ಪಿನ ಪದಸಮುಚ್ಚಯಗಳು ಸಾಂದರ್ಭಿಕ: ಸು.ಕೋ
PTI
ನ್ಯಾಯಾಲಯವು ನೀಡುವ ತೀರ್ಪುಗಳಲ್ಲಿ ಬಳಸುವ ಶಬ್ದಗಳು ಮತ್ತು ಪದಸಮುಚ್ಛಯಗಳನ್ನು ಸಾಂದರ್ಭಿಕವಾಗಿ ಪರಿಗಣಿಸಬೇಕೇ ವಿನಹ ವಾಚ್ಯಾರ್ಥ(ಅಕ್ಷರಕ್ಷರ) ರೂಪದಲ್ಲಿ ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. 'ವಿರಳದಲ್ಲಿ ವಿರಳ ಪ್ರಕರಣ' ಶಬ್ದವನ್ನು ವ್ಯಾಖ್ಯಾನಿಸುವ ವೇಳೆಗೆ ನ್ಯಾಯಾಲಯದ ಈ ಅಭಿಪ್ರಾಯ ಹೊರಬಿದ್ದಿದೆ.

"ತೀರ್ಪುಗಳಲ್ಲಿ ಬಳಸುವ ಕೆಲವು ಶಬ್ದಗಳನ್ನು ಸಾಂದರ್ಭಿಕವಾಗಿ ಓದಿ ಅರಿತುಕೊಳ್ಳಬೇಕು, ಬದಲಿಗೆ, ಅದರ ಅಕ್ಷರಶಃ ಅರ್ಥವನ್ನು ಪರಿಗಣಿಸಬೇಕೆಂಬ ಉದ್ದೇಶವಲ್ಲ. ಹೆಚ್ಚಿನ ವೇಳೆ ನ್ಯಾಯಾಧೀಶರು ಪದಗುಚ್ಛ ಅಥವಾ ಅಭಿವ್ಯಕ್ತಿಯನ್ನು ತೀರ್ಪಿನ ಅಂಶಕ್ಕೆ ಒತ್ತುಕೊಡುವ ಅಥವಾ ನೀತಿಯ ವರ್ಧನೆಗಾಗಿ ಅಥವಾ ಬರಹದ ಶೈಲಿಯ ವಿಧಾನದಿಂದಾಗಿ ಬಳಸುತ್ತಾರೆ" ಎಂಬುದಾಗಿ ಮುಖ್ಯನ್ಯಾಯ ಮೂರ್ತಿ ಕೆ.ಜಿ.ಬಾಲಕೃಷ್ಣನ್ ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ಎಚ್.ಕೆ.ಸೇಮಾ ಮತ್ತು ಮಾರ್ಖಾಂಡೇಯ ಕಟ್ಜು ಅವರನ್ನೊಳಗೊಂಡ ನ್ಯಾಯಪೀಠವು, ಕರ್ನಾಟಕದ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಕೊಲೆ ಪ್ರಕರಣದ ಕುರಿತು ಹೆವ್ಲೆಟ್ ಪ್ಯಾಕರ್ಡ್ ಗ್ಲೋಬಲ್ ಸಾಫ್ಟ್‌ವೇರ್ ಲಿಮಿಟೆಡ್‌ನ ಮಾಜಿ ಆಡಳಿತ ನಿರ್ದೇಶಕ ಸೋಮ ಮಿತ್ತಲ್ ಅವರ ವಿಚಾರಣೆ ಕುರಿತ ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದ್ದು, ಇದರ ವಿಚಾರಣೆ ವೇಳೆಗೆ ನ್ಯಾಯಪೀಠದ ಈ ಸ್ಪಷ್ಟೀಕರಣ ಹೊರಬಿದ್ದಿದೆ.

'ವಿರಳದಲ್ಲಿ ವಿರಳ'ವು ಮಿತವಾಗಿ ಮತ್ತು ಜಾಗರೂಕತೆಯೊಂದಿಗೆ ಎಂಬ ಅರ್ಥವನ್ನು ಸೂಚಿಸುತ್ತದೆ ಎಂದು ತ್ರಿಸದಸ್ಯಪೀಠ ಹೇಳಿದೆ.
ಮತ್ತಷ್ಟು
ಶಂಕಿತ ಸೋನಿಯಾ ಹತ್ಯಾಸಂಚು ಬಯಲಿಗೆ
ಚುನಾವಣೆಗೆ ಸಜ್ಜಾದ ತ್ರಿಪುರಾ
ರೈತರ ಸಾಲಮನ್ನಾ ಒತ್ತಾಯಿಸಿ ಸೇನಾ ಮುಷ್ಕರ
ಕಾಶ್ಮೀರ: ಅಕ್ರಮ ನುಸುಳುವಿಕೆ ಪತ್ತೆ
ಕಾಂಗ್ರೆಸ್‌ಗೆ ನಟ್ವರ್ ಸಿಂಗ್ ವಿದಾಯ
ಕ್ರಿಕೆಟಿಗರ ಹರಾಜು ನಾಚಿಕೆಗೇಡು: ಶರದ್