ಬಹುಕೋಟಿ ಅಕ್ರಮ ಕಿಡ್ನಿಕಸಿ ಜಾಲದ ಪ್ರಮುಖ ರೂವಾರಿ ವೈದ್ಯ ಅಮಿತ್ ಕುಮಾರ್‌ನನ್ನು ಇಲ್ಲಿನ ಸಿಬಿಐ ನ್ಯಾಯಾಲಯವೊಂದು ಮಾರ್ಚ್ 7ರ ತನಕ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
ಭಾರೀ ಬಿಗಿ ಬಂದೋಬಸ್ತಿನಲ್ಲಿ ಶುಕ್ರವಾರ ನ್ಯಾಯಾಧೀಶೆ ಸುನಿತ ಗ್ರೋವರ್ ಎದುರು ಅಮಿತ್ ಕುಮಾರ್‌ನನ್ನು ಹಾಜರು ಪಡಿಸಲಾಯಿತು. ನ್ಯಾಯಾಲಯದೊಳಕ್ಕೆ ತೆರಳಲು ಮಾಧ್ಯಮಗಳವರಿಗೆ ಅವಕಾಶ ನೀಡಲಿಲ್ಲ.
ಸಿಬಿಐ ವಕೀಲ ಎ.ಕೆ. ಸಿಂಗ್ ಅವರು ಕುಮಾರ್‌ನನ್ನು ಪೊಲೀಸ್ ವಶಕ್ಕೆ ಒಪ್ಪಿಸಬೇಕೆಂದು ಕೇಳದ ಕಾರಣ ಆತನನ್ನು ಇಲ್ಲಿನ ಕೇಂದ್ರೀಯ ಜೈಲಿನಲ್ಲಿ ಇರಿಸಲಾಗುವುದು.
ಅಮಿತ್ ಪರ ವಕೀಲ ಪ್ರದೀಪ್ ಬಾತ್ರ ಅವರು ತನ್ನ ಕಕ್ಷಿದಾರರಿಗೆ ತನ್ನ ಕುಟುಂಬದವರೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಅವಕಾಶ ನೀಡಬೇಕು ಎಂದು ಕೋರಿದರು. ನ್ಯಾಯಾಲಯವು ಇವರ ಅರಿಕೆಯನ್ನು ದಾಖಲಿಸಿಕೊಂಡಿತೇ ವಿನಹ ಯಾವುದೇ ನಿರ್ದೇಶನ ನೀಡಿಲ್ಲ.
ಅಮಿತ್ ಕುಮಾರ್ ಮತ್ತು ಇನ್ನಿತರರ ವಿರುದ್ಧ ಸಿಬಿಐ ಫೆ.8ರಂದು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು ಮತ್ತು ಮಾನವ ಅಂಗಗಳ ಕಸಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿತ್ತು.
|