ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತ್ರಿಪುರ ಚುನಾವಣೆ: ಮತದಾನ ಆರಂಭ
ತ್ರಿಪುರ ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಶನಿವಾರ ಬೆಳಗ್ಗೆ ಆರಂಭಗೊಂಡಿದ್ದು, 31 ಮಹಿಳೆಯರು ಸೇರಿದಂತೆ 60 ಸ್ಥಾನಗಳಿಗೆ ಒಟ್ಟು 313 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.

ಸುಮಾರು 2000 ಮತದಾನ ಕೇಂದ್ರಗಳಿದ್ದು, ಅವುಗಳಲ್ಲಿ 108 ಮತದಾನ ಕೇಂದ್ರಗಳನ್ನು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 60,000 ರಕ್ಷಣಾ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಟ್ಟು ಇರುವ 60 ಸ್ಥಾನಗಳಲ್ಲಿ, 20 ಸ್ಥಾನಗಳು ಪರಿಶಿಷ್ಟ ಪಂಗಡಗಳಿಗೆ, ಏಳು ಸ್ಥಾನಗಳು ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿದ್ದು, ಉಳಿದವುಗಳು ಸಾಮಾನ್ಯ ಸೀಟುಗಳಾಗಿವೆ.

ಆಡಳಿತರೂಢ ಎಡ ರಂಗ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಸ್ಪರ್ಧೆ ನಡೆಯಲಿದ್ದು, ಸಿಪಿಎಂ ನೇತೃತ್ವದ ಪಕ್ಷವು ಎಲ್ಲಾ 60 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಹೊಂದಿದೆ. 2003ರ ಚುನಾವಣೆಯಲ್ಲಿ ಸಿಪಿಎಂ 41 ಸ್ಥಾನಗಳ ಗೆಲುವು ಸಾಧಿಸಿತ್ತು.

ವಿರೋಧ ಪಕ್ಷ ಕಾಂಗ್ರೆಸ್‌ನಲ್ಲಿ 48 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದು, ಇದರ ಮುಖ್ಯ ಮೈತ್ರಿಪಕ್ಷವಾದ ಐಎನ್‌ಪಿಟಿ(ಇಂಡಿಜೀನಿಯಸ್ ನ್ಯಾಶನಲಿಸ್ಟ್ ಪಾರ್ಟಿ ಆಫ್ ತ್ರಿಪುರ) 11 ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ.

ರಾಜ್ಯದಲ್ಲಿ ಸುಮಾರು 20 ಲಕ್ಷ ದೃಢೀಕೃತ ಮತದಾರರಿದ್ದು, ಪ್ರತಿಯೊಬ್ಬರೂ ಚುನಾವಣಾ ಗುರುತು ಪತ್ರವನ್ನು ಹೊಂದಿದ್ದಾರೆ.
ಮತ್ತಷ್ಟು
ರಾಜ್ ಠಾಕ್ರೆ ಸಿದ್ಧಾಂತಕ್ಕೆ ಸು.ಕೋ ನಕಾರ
ಕಿಡ್ನಿ ಹಗರಣ ರೂವಾರಿ ಅಮಿತ್ ನ್ಯಾಯಾಂಗ ವಶಕ್ಕೆ
ಆಹಾ! ಮಾಜಿ ಉಗ್ರನ ಅದ್ದೂರಿ ಮದ್ವೆಯಂತೆ!
ತೀರ್ಪಿನ ಪದಸಮುಚ್ಚಯಗಳು ಸಾಂದರ್ಭಿಕ: ಸು.ಕೋ
ಶಂಕಿತ ಸೋನಿಯಾ ಹತ್ಯಾಸಂಚು ಬಯಲಿಗೆ
ಚುನಾವಣೆಗೆ ಸಜ್ಜಾದ ತ್ರಿಪುರಾ