ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುಲಿ ವಂಶ ರಕ್ಷಣೆಗೆ ಮುಂದಾಗಲು ಪ್ರಧಾನಿ ಕರೆ
ದೇಶದಲ್ಲಿ ಹುಲಿ ವಂಶ ನಿರ್ವಂಶವಾಗುವತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರು ಹುಲಿಗಳ ರಕ್ಷಿತಾರಣ್ಯವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಶನಿವಾರ ನವದೆಹಲಿಯಲ್ಲಿ ಕರೆದಿದ್ದು, ಅಭಯಾರಣ್ಯವಿರುವ ರಾಜ್ಯಗಳು ಹುಲಿ ಸಂರಕ್ಷಣೆಯನ್ನು ಸವಾಲಾಗಿ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಹುಲಿ ಸಂರಕ್ಷಣೆಗೆ ಕೇಂದ್ರ ಸರಕಾರ ಬದ್ದವಾಗಿದ್ದು ಈ ನಿಟ್ಟಿನಲ್ಲಿ ಸರಕಾರವು ಹಣಕಾಸು ನೆರವು ಮತ್ತು ಇತರ ಅಗತ್ಯ ನೆರವುಗಳನ್ನು ಒದಗಿಸಲಿದೆ. ಮುಖ್ಯಮಂತ್ರಿಗಳು ವೈಯಕ್ತಿಕವಾಗಿ ಹುಲಿ ಸಂರಕ್ಷಣೆಗೆ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ವೈಯಕ್ತಿಕ ನಿಗಾ ವಹಿಸಬೇಕು ಎಂದು ಕರೆ ನೀಡಿದ್ದಾರೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಕೇಂದ್ರ ಎಲ್ಲ ನೆರವು ನೀಡಲಿದ್ದು, ಹುಲಿಗಳ ಸಂರಕ್ಷಣೆಗೆ ಉದ್ದೇಶಿತ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಕೇಳಿಕೊಂಡರು.

ಸಂರಕ್ಷಣಾ ಯೋಜನೆಯ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇತ್ತೀಚೆಗೆ ನಡೆದ ಹುಲಿ ಗಣತಿಯಲ್ಲಿ ದೇಶದಲ್ಲಿ 1,415 ಹುಲಿಗಳು ಮಾತ್ರ ಇವೆ ಎಂದು ದಾಖಲಿಸಲಾಗಿದೆ. 2005ರಲ್ಲಿ ಹುಲಿಗಳ ಸಂಖ್ಯೆ ಅಂದಾಜು ಮೂರು ಸಾವಿರ ಇರಬಹುದು ಎಂದು ಅಂದಾಜಿಸಲಾಗಿತ್ತು.
ಮತ್ತಷ್ಟು
ಅಫ್ಜಲ್ ಗುರು ಶಿಕ್ಷೆ ಜಾರಿ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ನಕಾರ
ತ್ರಿಪುರ ಚುನಾವಣೆ: ಮತದಾನ ಆರಂಭ
ರಾಜ್ ಠಾಕ್ರೆ ಸಿದ್ಧಾಂತಕ್ಕೆ ಸು.ಕೋ ನಕಾರ
ಕಿಡ್ನಿ ಹಗರಣ ರೂವಾರಿ ಅಮಿತ್ ನ್ಯಾಯಾಂಗ ವಶಕ್ಕೆ
ಆಹಾ! ಮಾಜಿ ಉಗ್ರನ ಅದ್ದೂರಿ ಮದ್ವೆಯಂತೆ!
ತೀರ್ಪಿನ ಪದಸಮುಚ್ಚಯಗಳು ಸಾಂದರ್ಭಿಕ: ಸು.ಕೋ