ವರದಿಗಳ ಪ್ರಕಾರ 25 ಭಾರತೀಯ ಮೂಲದ ನಾವಿಕರುಗಳಿದ್ದ ಪನಾಮಾ ಮೂಲದ ಸರಕು ಸಾಗಾಣಿಕಾ ಹಡಗೊಂದು ಕಪ್ಪು ಸಮುದ್ರದಲ್ಲಿ ನಾಪತ್ತೆಯಾಗಿದೆ ಎಂದು ವರದಿಯಾಗಿದೆ. 25 ನಾವಿಕರಿದ್ದ ಹಡಗು ನಾಪತ್ತೆಯಾಗಿರುವ ಕುರಿತು ನಾವಿಕರ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿದೆ.
ರಷಿಯಾದಿಂದ ಟರ್ಕಿಯತ್ತ ಫೆಬ್ರವರಿ 17ರಂದು ಪ್ರಯಾಣ ಬೆಳೆಸಿದ ಹಡಗು ಮರುದಿನವೇ ನಿಯಂತ್ರಣಾ ಕೇಂದ್ರದ ಸಂಪರ್ಕ ಕಳೆದುಕೊಂಡಿದೆ ಎಂದು ಹಡಗಿನ ಉಸ್ತುವಾರಿ ವಹಿಸಿಕೊಂಡಿರುವ ಮುಂಬೈ ಮೂಲದ ಪೆಲಿಕನ್ ಮರೀನ್ ಸರ್ವಿಸ್ ಹೇಳಿದೆ. ರಷಿಯಾದ ನೋವೊರ್ಸಿಕ್ ಬಂದರಿನಿಂದ ಟರ್ಕಿಯ ಬಾರ್ಟಿನ್ ಬಂದರಿಗೆ ಹೋರಟಿದ್ದ ಹಡಗಿನಲ್ಲಿ ಉಕ್ಕು ಸಾಗಿಸಲಾಗುತ್ತಿತ್ತು.
ಪೆಲಿಕನ್ ಮರೀನ್‌ನ ನಿರ್ದೇಶಕ ಬಿಸ್ವಾಸ್ ಸಂತೋಷ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ದಿ 18ರ ರಾತ್ರಿ ಹಡಗು ಕಣ್ಮರೆಯಾಗಿದ್ದು. ಈ ಸಮಯದಲ್ಲಿ ಕಪ್ಪು ಸಮುದ್ರದಲ್ಲಿ ಚಂಡಮಾರುತ ಮತ್ತು ಬಿರುಗಾಳಿಯ ಲಕ್ಷಣಗಳು ಇದ್ದವು. ಘಟನೆಯ ಕುರಿತು ಕಂಪನಿಯ ಮಹಾನಿರ್ದೇಶಕರಿಗೆ ಮತ್ತು ಅದರಲ್ಲಿ ಇದ್ದ ಸಿಬ್ಬಂದಿಗಳ ಸಂಬಂಧಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಗಾಯಗೊಂಡವರ ಮತ್ತು ಮೃತಪಟ್ಟವರ ಕುರಿತು ಮಾತನಾಡಲಿಚ್ಚಿಸದ ಅವರು ಕೆಳ ಮಟ್ಟದಲ್ಲಿ ಹಾರಬಲ್ಲಂತಹ ವಿಮಾನ ಶೋಧನೆಯಲ್ಲಿ ನಿರತವಾಗಿದೆ ಎಂದು ಹೇಳಿದರು.
|