ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಡಗು ಕಣ್ಮರೆ; 25 ಭಾರತೀಯರು ನಾಪತ್ತೆ
ಪನಾಮನಿಯನ್ ಕಾರ್ಗೊ ಹಡುಗೊಂದು ಕಳೆದ ಸೋಮವಾರದಿಂದ ಕಪ್ಪು ಸಮುದ್ರದಲ್ಲಿ ಕಣ್ಮರೆಯಾಗಿದ್ದು, ಅದರಲ್ಲಿದ್ದ 25 ಭಾರತೀಯರು ನಾಪತ್ತೆಯಾಗಿದ್ದಾರೆಂದು ಮರೈನ್ ಮೂಲಗಳು ತಿಳಿಸಿವೆ.

ಫೆಬ್ರವರಿ 17ರಂದು ರಷ್ಯಾ ದೇಶದಿಂದ ತುರ್ಕಿ ದೇಶಕ್ಕೆ ತೆರಳುತ್ತಿದ್ದ ಹಡಗು ಸ್ಟೀಲ್ ವಸ್ತುಗಳನ್ನು ರಷ್ಯಾದಿಂದ ತುರ್ಕಿ ದೇಶದ ಬಾರ್ಟಿನ್ ಬಂದರಿಗೆ ಸಾಗಿಸುವಲ್ಲಿ ನಿರತವಾಗಿತ್ತು. ಆದರೆ ಕಳೆದ ಸೋಮವಾರದಿಂದ ಕಪ್ಪು ಸಮುದ್ರದಲ್ಲಿ ಕಣ್ಮರೆಯಾದ ಹಡಗು ಫೆಬ್ರವರಿ 18 ರಿಂದ ಎಲ್ಲ ಸಂಪರ್ಕ ಕೇಂದ್ರಗಳಿಂದ ಸಂಪರ್ಕವನ್ನು ಕಡಿದುಕೊಂಡಿದೆ ಎಂದು ನೌಕಾ ಮೂಲಗಳು ತಿಳಿಸಿವೆ.

ಫೆಬ್ರವರಿ 18 ರಂದು ಕೆಟ್ಟ ಹವಾಮಾನದ ಮುನ್ಸೂಚನೆಯನ್ನು ನೀಡಿದ್ದರೂ ಅದನ್ನು ಪರಿಗಣಿಸದೇ ಸಾಗಿದ್ದರಿಂದ ಅನಾಹುತ ಸಂಭವಿಸಿರುವ ಸಾಧ್ಯತೆಗಳಿವೆ. ಕಡಿಮೆ ಎತ್ತರದಲ್ಲಿ ಹಾರಾಟ ಮಾಡುವ ಹೆಲಿಕಾಪ್ಟರ್‌ಗಳನ್ನು ಶೋಧನೆಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪೆಲಿಕನ್ ಮರೈನ್ ನಿರ್ದೇಶಕರಾದ ಬಿಸ್ವಾಸ್ ಸಂತೋಷ್ ತಿಳಿಸಿದ್ದಾರೆ.

ಕಳೆದ ಐದು ದಿನಗಳ ನಿರಂತರ ಹುಡುಕಾಟದ ನಂತರವೂ ಇಲ್ಲಿಯವರೆಗೆಯಾವುದೇ ಸುಳಿವು ದೊರೆತಿಲ್ಲ ಎಂದು ಬಿಸ್ವಾಸ್
ಆತಂಕ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಹುಲಿ ವಂಶ ರಕ್ಷಣೆಗೆ ಮುಂದಾಗಲು ಪ್ರಧಾನಿ ಕರೆ
ಅಫ್ಜಲ್ ಗುರು ಶಿಕ್ಷೆ ಜಾರಿ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ನಕಾರ
ತ್ರಿಪುರ ಚುನಾವಣೆ: ಮತದಾನ ಆರಂಭ
ರಾಜ್ ಠಾಕ್ರೆ ಸಿದ್ಧಾಂತಕ್ಕೆ ಸು.ಕೋ ನಕಾರ
ಕಿಡ್ನಿ ಹಗರಣ ರೂವಾರಿ ಅಮಿತ್ ನ್ಯಾಯಾಂಗ ವಶಕ್ಕೆ
ಆಹಾ! ಮಾಜಿ ಉಗ್ರನ ಅದ್ದೂರಿ ಮದ್ವೆಯಂತೆ!