ಬಿಹಾರದ ಬಾಗಲ್ಪುರ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಅಜ್ಞಾತ ಬಂದೂಕುಧಾರಿಗಳು ರಾಷ್ಟ್ರೀಯ ಜನತಾದಳದ ನಾಯಕ ಲಕ್ಷ್ಮಿಕಾಂತ್ ಯಾದವ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಯಾದವ್ ಅವರು ಆರ್‌ಜೆಡಿಯ ಬಾಗಲ್ಪುರ ಜಿಲ್ಲಾ ಅಧ್ಯಕ್ಷರಾಗಿದ್ದರು.
ಕೆಲವು ಅಜ್ಞಾತ ಕ್ರಿಮಿನಲ್‌ಗಳು ಯಾದವ್ ಅವರನ್ನು ಗುಂಡಿಕ್ಕಿ ಕೊಂದಿದ್ದು, ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ. ಯಾದವ್ ಬಂಧನದ ಹಿನ್ನೆಲೆಯಲ್ಲಿ ಆರ್‌ಜೆಡಿ ಬೆಂಬಲಿಗರು ರಸ್ತೆ ತಡೆ ನಡೆಸಿ ಹಂತಕರನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದರು.
ಇದಕ್ಕೆ ಮುಂಚೆ ಈ ತಿಂಗಳಾದಿಯಲ್ಲಿ ಭಾಗಲ್ಪುರ ವಾರ್ಡ್ ಸಂಖ್ಯೆ 34ರ ಸದಸ್ಯೆಯ ಪತಿ ರೆಯಾಜುಲ್ ಖಾನ್ ಅವರನ್ನು ಕೂಡ ಪಾಟ್ನಾದಲ್ಲಿ ಗುಂಡಿಕ್ಕಿ ಸಾಯಿಸಲಾಗಿತ್ತು.
|