ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಪ್ರಿಲ್ ಮಾಸಾಂತ್ಯಕ್ಕೆ ಅಣು ಒಪ್ಪಂದ
ಅಮೆರಿಕದೊಂದಿಗೆ ಮಾಡಿಕೊಳ್ಳಲಾಗಿರುವ ನಾಗರಿಕ ಅಣು ಒಪ್ಪಂದದ ಜಾರಿಗೆ ಸಂಬಂಧಿಸಿದಂತೆ ಭಾರತ ಸರಕಾರವು ಅಂತಾರಾಷ್ಟ್ರೀಯ ಅಣು ಅಭಿವೃದ್ದಿ ಪ್ರಾಧಿಕಾರದೊಂದಿಗೆ ಅಣು ಶಕ್ತಿ ಬಳಕೆಯ ಕುರಿತು ಸುರಕ್ಷಾ ಒಪ್ಪಂದವನ್ನು ಮಾರ್ಚ್ ತಿಂಗಳಿನಲ್ಲಿ ಮಾಡಿಕೊಳ್ಳಲಿದ್ದು ಅಂತಿಮವಾಗಿ ಎಪ್ರಿಲ್ ತಿಂಗಳಿನಲ್ಲಿ ಇಂಡೋ-ಯುಎಸ್ ನಾಗರಿಕ ಅಣು ಒಪ್ಪಂದ ಜಾರಿಗೆ ಬರಲಿದೆ.

ನಾಗರಿಕ ಅಣು ಒಪ್ಪಂದವನ್ನು ಎಡಪಕ್ಷಗಳು ವಿರೋಧಿಸುತ್ತಿದ್ದು, ಒಪ್ಪಂದದ ಜಾರಿಗೆ ಮುಂದಾದಲ್ಲಿ ಯುಪಿಎಗೆ ನೀಡಿರುವ ಬಾಹ್ಯ ಬೆಂಬಲವನ್ನು ಹಿಂದೆಗೆದುಕೊಳ್ಳಲಾಗುವುದು ಎಂದು ಈಗಾಗಲೇ ಎಚ್ಚರಿಕೆ ನೀಡಿವೆ. ಭಾರತ ಸರಕಾರದ ಹಿರಿಯ ಅಧಿಕಾರಿಯೋರ್ವರು ಅಂತಾರಾಷ್ಟ್ರೀಯ ಅಣು ಪ್ರಾಧಿಕಾರದೊಂದಿಗೆ ಐದನೆ ಸುತ್ತಿನ ಮಾತುಕತೆ ನಡೆಸಿದ್ದಾರೆ.

ಭಾರತವನ್ನು ಗಮನದಲ್ಲಿ ಇಟ್ಟುಕೊಂಡು ಐಎಇಎಯೊಂದಿಗೆ ಮಾಡಿಕೊಳ್ಳಲಾಗುವ ಒಪ್ಪಂದವು ಅಣುಶಕ್ತಿ ಕೇಂದ್ರಗಳಿಂದ ನಿರಂತರ ವಿದ್ಯುತ್ ಪೂರೈಕೆಗೆ ಗಮನ ನೀಡಲಾಗುವುದು. ಅಣು ಶಕ್ತಿ ಕೇಂದ್ರಗಳಿಗೆ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಒಪ್ಪಂದದಲ್ಲಿ ಕ್ರಮತೆಗೆದುಕೊಳ್ಳಲಾಗಿದೆ.

ಅಂತಾರಾಷ್ಟ್ರೀಯ ಅಣು ಪ್ರಾಧಿಕಾರದ ಕೆಲ ನಿಯಮಗಳು ಭಾರತಕ್ಕೆ ಅನ್ವಯಿಸುವುದಿಲ್ಲ. ಭಾರತ ಅಣ್ವಸ್ತ್ರ ರಾಷ್ಟ್ರವಾಗಿದ್ದರೂ ಅಣ್ವಸ್ತ್ರ ಪ್ರಸರಣ ನಿಷೇದಕ್ಕೆ ಸಹಿ ಹಾಕಿಲ್ಲ. ಆದರೂ ಜಾಗತಿಕ ಮಟ್ಟದಲ್ಲಿ ಅಣು ಶಕ್ತಿ ಸಂಬಂಧಿ ವ್ಯವಹಾರಗಳಲ್ಲಿ ಪಾಲ್ಗೊಳ್ಳಲು ಇಚ್ಚಿಸುತ್ತಿದೆ.
ಮತ್ತಷ್ಟು
ಅಪರಿಚಿತರಿಂದ ಆರ್‌ಜೆಡಿ ಮುಖಂಡನ ಹತ್ಯೆ
ಹಡಗು ಕಣ್ಮರೆ; 25 ಭಾರತೀಯರು ನಾಪತ್ತೆ
ಕಪ್ಪು ಸಮುದ್ರದಲ್ಲಿ ಭಾರತೀಯರಿದ್ದ ಹಡಗು ನಾಪತ್ತೆ
ಹುಲಿ ವಂಶ ರಕ್ಷಣೆಗೆ ಮುಂದಾಗಲು ಪ್ರಧಾನಿ ಕರೆ
ಅಫ್ಜಲ್ ಗುರು ಶಿಕ್ಷೆ ಜಾರಿ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ನಕಾರ
ತ್ರಿಪುರ ಚುನಾವಣೆ: ಮತದಾನ ಆರಂಭ