ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಲೆ ಏರಿಕೆಗೆ ಸರಕಾರ ತಡೆಯೊಡ್ಡಲಿದೆ: ರಾಷ್ಟ್ರಪತಿ
PTI
ಯುಪಿಎ ಸರಕಾರ ಶೇ9 ದರದ ಅಭಿವೃದ್ಧಿಯನ್ನು ಕಾಯ್ದುಕೊಳ್ಳಲಿದೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯಲಿದೆ ಮತ್ತು ಭಯೋತ್ಪಾದನೆ ಮತ್ತು ಉಗ್ರವಾದದ ಬೆದರಿಕೆಯ ವಿರುದ್ಧ ಜಾಗೃತವಾಗಿರುತ್ತದೆ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹೇಳಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿಸದನಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಭಾರತ-ಅಮೆರಿಕ ಅಣುಒಪ್ಪಂದವು ಜಾರಿಗೆ ಬರಲಿದೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದರು.

ಬೆಲೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದರೊಂದಿಗೆ ಅಭಿವೃದ್ಧಿ ದರವನ್ನು ಕಾಯ್ದುಕೊಳ್ಳಲಿದೆ ಮತ್ತು ಆರ್ಥಿಕ ಅಭಿವೃದ್ಧಿಯು ಸಾಮಾಜಿಕ ಸೇರ್ಪಡೆ, ಪ್ರಾಂತೀಯ ಸಮತೋಲನ ಮತ್ತು ಪರಿಸರ ಸ್ಥಿರತೆಯನ್ನು ಖಚಿತಗೊಳಿಸಲು ಮುಂದುವರಿದ ಪ್ರಯತ್ನವನ್ನು 'ನನ್ನ ಸರಕಾರ' ಮುಂದುವರಿಸಲಿದೆ ಎಂದು ನುಡಿದರು.

ನಾಲ್ಕು ವರ್ಷಗಳ ಕಾಲದ ಮನಮೋಹನ್ ಸಿಂಗ್ ಸರಕಾರದ ಸಾಧನೆಗಳ ಸುದೀರ್ಘ ಪಟ್ಟಿಯನ್ನು ಪ್ರಸ್ತುತ ಪಡಿಸಿದ ಅವರು ಒಟ್ಟಾರೆಯಾಗಿ ಆಂತರಿಕ ಭದ್ರತೆಯು ನಿಯಂತ್ರಣದಲ್ಲಿದೆ ಎಂದು ನುಡಿದರು.

ಕಾನೂನು ಸುವ್ಯವಸ್ಥೆ, ಕೋಮು ಸೌಹಾರ್ದತೆ, ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಭಂಗವುಂಟುಮಾಡಲು ಯತ್ನಿಸುವ ಸಮಾಜ ವಿರೋಧಿ, ರಾಷ್ಟ್ರ ವಿರೋಧಿ ಗುಂಪುಗಳ ವಿರುದ್ಧ ರಾಷ್ಟವು ಸದಾ ಎಚ್ಚರಿಕೆಯಿಂದ ಇರುತ್ತದೆ ಎಂದು ನುಡಿದರು.

ಸಾಮಾಜಿಕ ವಲಯದಲ್ಲಿ ಮಹಿಳಾ ಸಾಕ್ಷರತೆಯ ಮೂಲಕ ಮಹಿಳಾ ಸಬಲೀಕರಣ ಸರಕಾರದ ಏಕೈಕ ಅತಿದೊಡ್ಡ ಸವಾಲು ಎಂದು ರಾಷ್ಟ್ರಪತಿಗಳು ನುಡಿದರಾದರೂ, ಸಂಸತ್ತು ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ ಕುರಿತು ಅವರ ಭಾಷಣದಲ್ಲಿ ಚಕಾರವಿರಲಿಲ್ಲ.
ಮತ್ತಷ್ಟು
ಕೋತಿಗಳ ಜನುಮ ಜನುಮದ ಅನುಬಂಧ!
14 ವರ್ಷ, 13 ನ್ಯಾಯಾಧೀಶರು, 1 ವರ್ಷ ಜೈಲು ಶಿಕ್ಷೆ!
ಎಪ್ರಿಲ್ ಮಾಸಾಂತ್ಯಕ್ಕೆ ಅಣು ಒಪ್ಪಂದ
ಅಪರಿಚಿತರಿಂದ ಆರ್‌ಜೆಡಿ ಮುಖಂಡನ ಹತ್ಯೆ
ಹಡಗು ಕಣ್ಮರೆ; 25 ಭಾರತೀಯರು ನಾಪತ್ತೆ
ಕಪ್ಪು ಸಮುದ್ರದಲ್ಲಿ ಭಾರತೀಯರಿದ್ದ ಹಡಗು ನಾಪತ್ತೆ