ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರಿಶಿಷ್ಟರಿಗೆ ವೈದ್ಯಕೀಯ ಕೋರ್ಸುಗಳಿಗೆ ಮೀಸಲಾತಿ
ಅಖಿಲ ಭಾರತೀಯ ಪ್ರವೇಶ ಪರೀಕ್ಷೆಯಡಿ ವೈದ್ಯಕೀಯ ಮತ್ತು ದಂತವೈದ್ಯಕೀಯ ಪದವಿಪೂರ್ವ ಕೋರ್ಸುಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಮೀಸಲಾತಿ ಜಾರಿಗೆ ತರಲು ಸರಕಾರ ನಿರ್ಧರಿಸಿದೆ.

ಪ್ರೌಢ ಶಿಕ್ಷಣದ ಕೇಂದ್ರೀಯ ಮಂಡಳಿ(ಸಿಬಿಎಸ್‌ಸಿ)ಯು ನಡೆಸುವ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಶೇ 15 ಹಾಗೂ ಪರಿಶಿಷ್ಟ ವರ್ಗಗಳ ಅಭ್ಯರ್ಥಿಗಳಿಗೆ ಶೇ.7.5ರಷ್ಟು ಮೀಸಲಾತಿ ಒದಗಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕರಿಗೆ ನಿರ್ದೇಶನ ನೀಡಿದೆ.

ಈ ಮೀಸಲಾತಿಯಿಂದಾಗಿ ಈ ವರ್ಷ ಸುಮಾರು 310 ಪರಿಶಿಷ್ಟ ಜಾತಿಯ ಮತ್ತು 155 ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಅನುಕೂಲ ಪಡೆಯಲಿದ್ದಾರೆ. 2007ರಲ್ಲಿ ಎಂಬಿಬಿಎಸ್/ಬಿಡಿಎಸ್‌ನ ಎಲ್ಲಾ 2,075 ಸ್ಥಾನಗಳನ್ನು ಅರ್ಹತೆಯ ಆಧಾರದಲ್ಲಿಯೇ ತುಂಬಲಾಗಿತ್ತು. ಈ ಕುರಿತಂತೆ ಸುಪ್ರೀಂ ಕೋರ್ಟಿಗೆ ಆರೋಗ್ಯ ಸಚಿವಾಲಯವು ಸಲ್ಲಿಸಿದ್ದ ದೂರಿನ ವಿಚಾರಣೆ ವೇಳೆಗೆ, ಈ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿತ್ತು.
ಮತ್ತಷ್ಟು
ಬೆಲೆ ಏರಿಕೆಗೆ ಸರಕಾರ ತಡೆಯೊಡ್ಡಲಿದೆ: ರಾಷ್ಟ್ರಪತಿ
ಕೋತಿಗಳ ಜನುಮ ಜನುಮದ ಅನುಬಂಧ!
14 ವರ್ಷ, 13 ನ್ಯಾಯಾಧೀಶರು, 1 ವರ್ಷ ಜೈಲು ಶಿಕ್ಷೆ!
ಎಪ್ರಿಲ್ ಮಾಸಾಂತ್ಯಕ್ಕೆ ಅಣು ಒಪ್ಪಂದ
ಅಪರಿಚಿತರಿಂದ ಆರ್‌ಜೆಡಿ ಮುಖಂಡನ ಹತ್ಯೆ
ಹಡಗು ಕಣ್ಮರೆ; 25 ಭಾರತೀಯರು ನಾಪತ್ತೆ