ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಒಪ್ಪಂದ ಇಲ್ಲ ಸರಕಾರ': ಆಯ್ಕೆ ಯುಪಿಎಯದ್ದು
ಅಮೆರಿಕ ಮತ್ತು ಭಾರತ ನಡುವಿನ ಅಣುಒಪ್ಪಂದ ಮುಂದುವರಿಯುವ ಆಶಾವಾದವನ್ನು ರಾಷ್ಟ್ರಪತಿಗಳ ಭಾಷಣದಲ್ಲಿ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸರಕಾರಕ್ಕೆ ಎಚ್ಚರಿಕೆ ನೀಡಿರುವ ಎಡಪಕ್ಷಗಳು, 'ಸರಕಾರ ಮತ್ತು ಒಪ್ಪಂದ', ಈ ಎರಡಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳವಂತೆ ಯುಪಿಎಗೆ ಸೂಚಿಸಿದೆ.

ಭಾರತ-ಅಮೆರಿಕ ಅಣು ಒಪ್ಪಂದದಲ್ಲಿ ಮುಂದುವರಿಯುವುದಿಲ್ಲ ಎಂಬ ತನ್ನ ಬದ್ಧತೆಯನ್ನು ಉಲ್ಲಂಘಿಸಿದ್ದುದೇ ಆದರೆ ಸರಕಾರವು ಅದರ ಫಲ ಅನುಭವಿಸಬೇಕಾದೀತು ಎಂಬುದಾಗಿ ಹಿರಿಯ ಸಿಪಿಐ(ಎಂ) ನಾಯಕ ಎಂ.ಕೆ. ಪಂಧೆ ಹೇಳಿದ್ದಾರೆ. ಇಲ್ಲಿ ನಡೆಯುತ್ತಿರುವ ಎರಡು ದಿನಗಳ ಕಾಲದ ಪಕ್ಷದ ಪಾಲಿಟ್ ಬ್ಯೂರೋ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.

ಈ ವಿಷಯದ ಕುರಿತಂತೆ ಎಡಪಕ್ಷಗಳ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಒಪ್ಪಂದದ ಕುರಿತ ತಮ್ಮ ವಿರೋಧದ ಕುರಿತು ನಾವು ದೃಢವಾಗಿದ್ದೇವೆ. ಸರಕಾರ ತನ್ನ ನಿರ್ಧಾರ ಕೈಗೊಳ್ಳಬೇಕು ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಡಿ ರಾಜ ನುಡಿದರು. ಅಣುಒಪ್ಪಂದ ಕುರಿತು ಪ್ರತಿಭಾ ಪಾಟೀಲರ ಹೇಳಿಕೆಯು ಸಂಸತ್ತಿನ ಅಭಿಪ್ರಾಯ ಅಲ್ಲ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.
ಮತ್ತಷ್ಟು
ಕಾಶ್ಮೀರದಲ್ಲಿ ಲಘು ಕಂಪನ
ಪರಿಶಿಷ್ಟರಿಗೆ ವೈದ್ಯಕೀಯ ಕೋರ್ಸುಗಳಿಗೆ ಮೀಸಲಾತಿ
ಬೆಲೆ ಏರಿಕೆಗೆ ಸರಕಾರ ತಡೆಯೊಡ್ಡಲಿದೆ: ರಾಷ್ಟ್ರಪತಿ
ಕೋತಿಗಳ ಜನುಮ ಜನುಮದ ಅನುಬಂಧ!
14 ವರ್ಷ, 13 ನ್ಯಾಯಾಧೀಶರು, 1 ವರ್ಷ ಜೈಲು ಶಿಕ್ಷೆ!
ಎಪ್ರಿಲ್ ಮಾಸಾಂತ್ಯಕ್ಕೆ ಅಣು ಒಪ್ಪಂದ