ಭಯೋತ್ಪಾದನೆಯು ಇಸ್ಲಾಮಿ ತತ್ವಗಳಿಗೆ ವಿರೋಧವಾದುದು ಎಂಬ ಸ್ಪಷ್ಟವಾಗಿ ಹೇಳಿರುವ ರಾಷ್ಟ್ರದ ಉನ್ನತ ಮುಸ್ಲಿಂ ಸಂಘಟನೆಗಳು, ಇದು ಇಸ್ಲಾಮ್‌ನ ಶಾಂತಿ ತತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ದಿಯೋಬಂದ್‌ನಲ್ಲಿ ಸೋಮವಾರ ನಡೆಸಿರುವ ಸಭೆಯಲ್ಲಿ ಮುಸ್ಲಿಂ ಸಂಘಟನೆಗಳು ಈ ನಿರ್ಧಾರ ಕೈಗೊಂಡಿವೆ. ಇಸ್ಲಾಮಿಕ್ ಸಂಘಟನೆ ದಾರುಲ್ ಉಲೂಮ್ ಸಂಘಟಿಸಿದ್ದ ಭಯೋತ್ಪಾದನಾ ಸಮ್ಮೇಳನದಲ್ಲಿ ರಾಷ್ಟ್ರಾದ್ಯಂತದ ವಿವಿಧ ಪಂಥಗಳ ಹಾಗೂ ಪಂಗಡಗಳ ಇಸ್ಲಾಮಿಕ್ ಧರ್ಮಗುರುಗಳು, ವಿದ್ವಾಂಸರು, ಪಂಡಿತರು ಮತ್ತು ಧಾರ್ಮಿಕ ನಾಯಕರು ಪಾಲ್ಗೊಂಡಿದ್ದರು.
"ಇಸ್ಲಾಂ ತಂಟೆಕೋರ, ಗಲಭೆ ಎಬ್ಬಿಸುವ ಮತ್ತು ಅತ್ಯಂತ ಪಾಪಕರ್ಮ ಮತ್ತು ಅಪರಾಧಗಳನ್ನು ಎಸಗುತ್ತಿದೆ ಎಂದು ಪರಿಗಣಿಸಲಾಗಿದೆ. ಅಲ್ಲದೆ ಕೆಲವೊಮ್ಮೆ ಅಸಹಿಷ್ಣುತೆಯ ಗೂಬೆಯನ್ನೂ ಸಹಾ ಇಸ್ಲಾಂ ಮೇಲೆ ಕೂರಿಸಲಾಗುತ್ತಿದೆ" ಎಂದು ಈ ಘೋಷಣೆಯಲ್ಲಿ ಹೇಳಲಾಗಿದೆ.
ಇಸ್ಲಾಂ ವಿರೋಧಿ ಹಾಗೂ ರಾಷ್ಟ್ರವಿರೋಧಿ ಪಡೆಗಳಿಂದ ಪ್ರಭಾವ ಹೊಂದಬಾರದು ಎಂದು ಇಸ್ಲಾಮಿಕ್ ವಿದ್ವಾಂಸರನ್ನು ಘೋಷಣೆಯಲ್ಲಿ ಕೇಳಿಕೊಳ್ಳಲಾಗಿದೆ. ಭಯೋತ್ಪಾದನೆ, ಭಯೋತ್ಪಾದಕರು ಅಥವಾ ಇಂತಹ ಯಾವುದರೊಂದಿಗೂ ನಮಗೆ ಸಂಪರ್ಕವಿಲ್ಲ. ನಾವು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ಭಯೋತ್ಪಾದನೆಯು ಇಸ್ಲಾಂ ತತ್ವಗಳಿಗೆ ಸಂಪೂರ್ಣ ವಿರೋಧವಾಗಿದೆ. ಇಸ್ಲಾಂ ಪ್ರೀತಿ ಮತ್ತು ಶಾಂತಿಯ ನಂಬುಗೆಯನ್ನು ಪ್ರತಿಪಾದಿಸುತ್ತದೆ" ಎಂದು ದಾರುಲ್ ಉಲೇಮ್‌ನ ಮುಖ್ಯಸ್ಥ ಮೌಲಾನ ಮರ್ಗೂಬ್-ಉರ್ ರೆಹ್ಮಾನ್ ಹೇಳಿದ್ದಾರೆ.
|