ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೇತುಸಮುದ್ರಂ: ಅಂತಿಮ ನಿರ್ಧಾರಕ್ಕೆ ಸಭೆ ವಿಫಲ
ವಿವಾದಾತ್ಮಕ ಸೇತುಸಮುದ್ರಂ ಯೋಜನೆ ಕುರಿತ ಬಿಕ್ಕಟ್ಟು ಪರಿಹಾರಕ್ಕಾಗಿ ಸೋಮವಾರ ಸಭೆ ಸೇರಿದ್ದ ಸಚಿವರ ತಂಡವು ವಿವಾದ ಪರಿಹಾರಕ್ಕಾಗಿ ಕೇಂದ್ರದ ನಿಲುವಿಗೆ ಅಂತಿಮ ರೂಪ ನೀಡುವಲ್ಲಿ ಸೋತಿದೆ.

ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದ ಸಚಿವರ ತಂಡದ ಸಭೆಯ ಬಳಿಕ ನೌಕಾಯಾನ ಸಚಿವ ಟಿ.ಆರ್.ಬಾಲು ವರದಿಗಾರರ ಜತೆ ಮಾತನಾಡುತ್ತಾ, ಇನ್ನೂ ಯಾವ ಅಂತಿಮ ನಿರ್ಧಾರವನ್ನೂ ಕೈಗೊಂಡಿಲ್ಲ. ಇದು ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳಲಿದೆ ಎಂದು ನುಡಿದರು.

ಸೇತುಸಮುದ್ರಂ ಯೋಜನೆ ಬಗ್ಗೆ ಬಾಲು ಮತ್ತು ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ನಡುವೆ ಭಿನ್ನಾಭಿಪ್ರಾಯ ಉದ್ಭವಿಸಿದೆ. ಯೋಜನೆಗೆ ಚಾಲನೆ ನೀಡಲು ನೌಕಾಯಾನ ಸಚಿವಾಲಯ ಇಚ್ಛಿಸಿದೆಯಾದರೂ ಅಂತಾರಾಷ್ಟ್ರೀಯ ನಿಯಮಗಳ ಅನ್ವಯ ವಿವರವಾದ ಪುರಾತತ್ವ ಸಮೀಕ್ಷೆ ನಡೆಸಬೇಕೆಂದು ಸೋನಿ ಒತ್ತಾಯಿಸಿದ್ದಾರೆ.

ಕಾನೂನು ಸಚಿವ ಭಾರದ್ವಾಜ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಾಲ್ ಮತ್ತು ವಿತ್ತಸಚಿವ ಪಿ.ಚಿದಂಬರಂ ಭಾಗವಹಿಸಿದ್ದ ಸಭೆಯ ವಿವರಣೆಯನ್ನು ನೀಡಲು ಅವರು ನಿರಾಕರಿಸಿದ್ದಾರೆ.

ಸೇತು ಸಮುದ್ರಂ ಯೋಜನೆ ಕುರಿತು ಪ್ರಮಾಣಪತ್ರ ಸಲ್ಲಿಸಲು ಇನ್ನೂ ನಾಲ್ಕು ವಾರಗಳ ಕಾಲಾವಕಾಶವನ್ನು ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಜ.31ರಂದು ನೀಡಿದ್ದು, ಮಾರ್ಚ್ ಮೊದಲವಾರದೊಳಗೆ ಈ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗಿದೆ. ಹಿಂದಿನ ಸಚಿವರ ಸಮೂಹದ ಸಭೆಯಲ್ಲಿ ಸೇತುಸಮುದ್ರಂ ಯೋಜನೆ ಬಗ್ಗೆ ಭಿನ್ನಾಭಿಪ್ರಾಯ ಉದ್ಭವಿಸಿ ಸೋನಿ ಸಭೆಯಿಂದ ಹೊರನಡೆದಿದ್ದರು. ಸೇತುಸಮುದ್ರಂ ಯೋಜನೆಗೆ ಸೋನಿ ಅಡ್ಡಗಾಲಿಕ್ಕುತ್ತಿದ್ದಾರೆ ಎಂಬ ಬಾಲು ಆರೋಪವನ್ನು ಪ್ರತಿಭಟಿಸಿ ಸೋನಿ ಸಭಾತ್ಯಾಗ ಮಾಡಿದ್ದರು.
ಮತ್ತಷ್ಟು
ಭಯೋತ್ಪಾದನೆ ಇಸ್ಲಾಂ ವಿರೋಧಿ: ದಾರುಲ್ ಉಲೇಮಾ
'ಒಪ್ಪಂದ ಇಲ್ಲ ಸರಕಾರ': ಆಯ್ಕೆ ಯುಪಿಎಯದ್ದು
ಕಾಶ್ಮೀರದಲ್ಲಿ ಲಘು ಕಂಪನ
ಪರಿಶಿಷ್ಟರಿಗೆ ವೈದ್ಯಕೀಯ ಕೋರ್ಸುಗಳಿಗೆ ಮೀಸಲಾತಿ
ಬೆಲೆ ಏರಿಕೆಗೆ ಸರಕಾರ ತಡೆಯೊಡ್ಡಲಿದೆ: ರಾಷ್ಟ್ರಪತಿ
ಕೋತಿಗಳ ಜನುಮ ಜನುಮದ ಅನುಬಂಧ!