ಭಾರತವು ತನ್ನ ಪ್ರಥಮ ಜಲಾಂತರ್ಗಾಮಿ ಕ್ಷಿಪಣಿಯ ಯಶಸ್ವೀ ಪರೀಕ್ಷೆಯನ್ನು ಮಂಗಳವಾರ ನಡೆಸಿದೆ.
ಇಲ್ಲಿಂದ ಸುಮಾರು 15 ಕಿ.ಮೀ ದೂರದಲ್ಲಿ ಬಂಗಾಳ ಕೊಲ್ಲಿಯಲ್ಲಿ ಭಾರತ ತನ್ನ ಚೊಚ್ಚಲ ಜಲಾಂತರ್ಗಾಮಿ ಖಂಡಾಂತರ ಕ್ಷಿಪಣಿಯ ಪ್ರಯೋಗ ನಡೆಸಿದ್ದು, ಪರಮಾಣು ಪ್ರತಿರೋಧಕ ತಂತ್ರಜ್ಞಾನ ಹೊಂದಿರುವ ಐದು ರಾಷ್ಟ್ರಗಳ ಆಯ್ದ ಗುಂಪಿಗೆ ಸೇರಿದೆ.
ಇಂತಹ ಪ್ರಯೋಗಕ್ಕಾಗಿ ಭಾರತ ಜಲಾಂತರ್ಗಾಮಿ ನೌಕೆ ಹೊಂದಿಲ್ಲದ ಕಾರಣ, 700 ಕಿ.ಮೀ ಸಾಮರ್ಥ್ಯದ ಈ ಕೆ-15 ಕ್ಷಿಪಣಿಯನ್ನು ಒಂದು ಚಪ್ಪಟೆ ತಳದ ಹಡಗಿನಿಂದ ಪ್ರಯೋಗಿಸಲಾಯಿತು. ಈ ಯಶಸ್ವೀ ಹಾರಾಟವು ರಾಷ್ಟ್ರವನ್ನು ಅಮೆರಿಕ, ರಷ್ಯಾ, ಫ್ರಾನ್ಸ್ ಮತ್ತು ಚೀನದ ಸಾಲಿನಲ್ಲಿ ನಿಲ್ಲಿಸಿದೆ ಎಂದು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಘಟನೆಯ ಮುಖ್ಯಸ್ಥ ಎಸ್. ಪ್ರಹ್ಲಾದ್ ಹೇಳಿದ್ದಾರೆ.
ಈ ಜಲಾಂತರ್ಗಾಮಿ ಕ್ಷಿಪಣಿಯು ಅಣುಸಿಡಿತಲೆಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದ್ದು, ದೇಶದ ದ್ವಿತೀಯ-ದಾಳಿ ಪರಮಾಣು ಸಾಮರ್ಥ್ಯದ ನಿರ್ಣಾಯಕ ಭಾಗವಾಗಿದೆ.
|