ರಾಜ್ಯದಲ್ಲಿ ಬಾಲಿವುಡ್ ಚಿತ್ರ ಜೋಧಾ ಅಕ್ಬರ್ ಪ್ರದರ್ಶನಕ್ಕೆ ಹೇರಿದ್ದ ನಿಷೇಧವನ್ನು ಮಧ್ಯಪ್ರದೇಶ ಹೈಕೋರ್ಟ್ ತೆರವುಗೊಳಿಸಿದೆ.
ಜೋಧಾ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಜಪೂತ ಸಮುದಾಯ ಸಿನಿಮಾ ಪ್ರದರ್ಶನವನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಸಿತ್ತು.
ಸಿನಿಮಾದಲ್ಲಿ ಜೋಧಾಬಾಯ್ ಮಹಾರಾಜ ಅಕ್ಬರನ ಪತ್ನಿ ಎಂಬುದಾಗಿ ಬಿಂಬಿಸಲಾಗಿದೆ. ಆದರೆ ಜೋಧಾ ಅಕ್ಬರನ ಪತ್ನಿ ಅಲ್ಲ, ಬದಲಿಗೆ ಆತನ ಪುತ್ರ ಜಹಾಂಗೀರ್ನ ಪತ್ನಿ ಎಂಬುದಾಗಿ ಹೇಳುತ್ತಿರುವ ಪ್ರತಿಭಟನಾಕಾರರು ಇತಿಹಾಸವನ್ನು ತಿರುಚಲಾಗಿದೆ ಎಂದು ಆಪಾದಿಸಿದ್ದಾರೆ.
|