ಆಂಧ್ರ ಪ್ರದೇಶದ ಚಿತ್ತೂರಿನ ಹೊಟೇಲೊಂದರಿಂದ ಕೇಂದ್ರ ಸಚಿವ ದಾಸರಿ ನಾರಾಯಣ ರಾವ್ ಅವರ ಪುತ್ರ ಹರಿಹರ್ ಪ್ರಭುವನ್ನು ಅಪಹರಿಸಲಾಗಿದೆ.
ಆಂಧ್ರದ ರಾಜ್ಯಸಭಾ ಸದಸ್ಯರಾಗಿರುವ ರಾವ್, ಮನಮೋಹನ್ ಸಿಂಗ್ ಅವರ ಸಚಿವ ಸಂಪುಟದಲ್ಲಿ ಕಲ್ಲಿದ್ದಲು ಖಾತೆಯ ರಾಜ್ಯಸಚಿವರಾಗಿದ್ದಾರೆ.
ಪ್ರಭು ಅವರ ಪತ್ನಿ ಸುಶೀಲಾ ಚಿತ್ತೂರು ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಈ ಕುರಿತು ದೂರು ದಾಖಲಿಸಿದ್ದು, ಮಂಗಳವಾರ ಸಾಯಂಕಾಲ ಸುಮಾರು ಆರುವರೆ ಗಂಟೆಯ ವೇಳೆಗೆ ಐದರಿಂದ ಆರರಷ್ಟಿದ್ದ ಅಪರಿಚಿತರ ಶಸ್ತ್ರಧಾರಿ ಗುಂಪೊಂದು ತನ್ನ ಪತಿಯನ್ನು ಅಪಹರಿಸಿದೆ ಎಂದು ಹೇಳಿದ್ದಾರೆ.
ಅಪಹರಣ ಪ್ರಕರಣದಲ್ಲಿ, ಅಪಹರಣಕಾರರು ದೊಡ್ಡಮೊತ್ತದ ಬೇಡಿಕೆ ಇಡುವುದು ಸಾಮಾನ್ಯ. ಆದರೆ ಈ ಪ್ರಕರಣದಲ್ಲಿ ಅಪಹರಣಕಾರರು ಇದುವರೆಗೆ ಹಣದ ಬೇಡಿಕೆಯನ್ನೂ ಇಟ್ಟಿಲ್ಲ ಮತ್ತು, ಪೋನ್ ಕರೆಗಳನ್ನು ಮಾಡಿಲ್ಲ ಎಂದು ವರದಿ ತಿಳಿಸಿದೆ.
ಪತ್ನಿ ಮತ್ತು ಪುತ್ರನೊಡನೆ ಹೊಟೇಲಿನಲ್ಲಿ ತಂಗಿದ್ದ ಪ್ರಭು ಅವರನ್ನು ಅಪಹರಣಕಾರರು ಕೊಠಡಿಯೊಳಕ್ಕೆ ನುಗ್ಗಿ ಬಂದೂಕಿನ ಮೊನೆಹಿಡೆದೇ ಕರೆದೊಯ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
|