ರೈಲಿನಡಿ ಸಿಲುಕಿ ಕನಿಷ್ಠ 16 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಬುಧವಾರ ರಾತ್ರಿ ಉದ್ನಾ ಜಿಲ್ಲೆಯಲ್ಲಿ ಸಂಭವಿಸಿರುವುದಾಗಿ ರೈಲ್ವೇ ಪೊಲೀಸರು ತಿಳಿಸಿದ್ದಾರೆ.
ಸತ್ತವರಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳೂ ಸೇರಿದ್ದಾರೆ. ಸತ್ತವರೆಲ್ಲಾ ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದು, ಈ ದುರ್ದೈವಿಗಳು ರೈಲು ಹಳಿಯನ್ನು ದಾಟುತ್ತಿದ್ದು, ವೇಗದಿಂದ ಬಂದ ರೈಲು ಅಪ್ಪಳಿಸಿ ಸಾವನ್ನಪ್ಪಿದ್ದಾರೆ ಎಂದು ರೈಲ್ವೇ ಪೊಲೀಸ್ ಅಧಿಕಾರಿ ಎಚ್.ಎಂ.ಪಟೇಲ್ ಹೇಳಿದ್ದಾರೆ.
ಕಾಕ್ರಕಾಡಿ ಸೇತುವೆಯಲ್ಲಿ ಈ ಅಪಘಾತ ಸಂಭವಿದ್ದು, ಸೂರತ್ ಮುಂಬೈ ನಡುವೆ ಓಡಾಡುವ 'ಫ್ಲಲೈಂಗ್ ರಾಣಿ' ರೈಲಿನ ಚಾಲಕ ಈ ಘಟನೆಯ ಕುರಿತು ತಕ್ಷಣ ಮಾಹಿತಿ ನೀಡಿದರೆಂದು ಪಟೇಲ್ ತಿಳಿಸಿದ್ದಾರೆ.
|