ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೆರಿಗೆಭತ್ಯೆ ವಿಸ್ತರಣೆ ಮಸೂದೆ ಅಂಗೀಕಾರ
ರೈತರ ಸಮಸ್ಯೆ ಕುರಿತು ರಾಜ್ಯಸಭೆಯಲ್ಲಿ ನಡೆದ ಭಾರೀ ಕೋಲಾಹಲದ ನಡುವೆಯೂ, ಬುಧವಾರ ಹೆರಿಗೆಭತ್ಯೆ ವಿಸ್ತರಣೆ ಮಸೂದೆಯನ್ನು ಧ್ವನಿಮತದ ಆಧಾರದಲ್ಲಿ ಅಂಗೀಕರಿಸಲಾಗಿದೆ.

ಕಾರ್ಖಾನೆಗಳು, ಅಂಗಡಿಗಳು ಹಾಗೂ ತೋಟಗಳಲ್ಲಿ ಕೆಲಸಮಾಡುವ ಕಾರ್ಮಿಕ ಮಹಿಳೆಯರಿಗೆ ನೀಡುವ ಹೆರಿಗೆಭತ್ಯೆಯನ್ನು 250 ರೂಪಾಯಿಯಿಂದ ಸಾವಿರ ರೂಪಾಯಿಗೆ ಏರಿಸುವ ತಿದ್ದುಪಡಿ ಮಸೂದೆಯನ್ನು ಪಾಸುಮಾಡಲಾಗಿದೆ.

ಹೆರಿಗೆ ಭತ್ಯೆ ಕಾಯ್ದೆ 1961ಕ್ಕೆ ತಂದಿರುವ ತಿದ್ದುಪಡಿ ಪ್ರಕಾರ, ಕೇಂದ್ರ ಸರಕಾರವು ಹೆರಿಗೆ ಭತ್ಯೆಯನ್ನು ಗರಿಷ್ಠ 20 ಸಾವಿರದ ತನಕ ಏರಿಸಬಹುದಾಗಿದೆ. ಈ ಮಸೂದೆಯು ಹೆರಿಗೆಯ ಮುಂಚೆ ಹಾಗೂ ನಂತರ ಪಡೆಯಬಹುದಾದ ಅನುಕೂಲತೆಗಳನ್ನು ವಿವರಿಸುತ್ತದೆ.

ಮಸೂದೆಯ ಕುರಿತು ವಿವಿಧ ಸದಸ್ಯರು, ವಿಶೇಷವಾಗಿ ಸಮಾಜವಾದಿ ಪಕ್ಷದ ಜಯಾಬಚ್ಚನ್ ಹಾಗೂ ಸಿಪಿಐ-ಎಂನ ಬೃಂದಾ ಕಾರಟ್ ಅವರುಗಳು ಚರ್ಚಿಸಲು ಆಸಕ್ತರಾಗಿದ್ದರೂ, ಕೂಗಾಟ, ಕೋಲಾಹಲದ ಮಧ್ಯೆಯೆ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಮತ್ತಷ್ಟು
ಸೇತುಸಮುದ್ರಂ ಅಫಿದಾವಿತ್ ಅಂಗೀಕಾರ
ರೈತರ ಸಮಸ್ಯೆ: ಮತ್ತೆ ಸದನಗಳ ಮುಂದೂಡಿಕೆ
ರೈಲಿನಡಿ ಸಿಲುಕಿ 16 ಮಂದಿ ದಾರುಣ ಸಾವು
ಜಸ್ಬೀರ್ ದೆಹಲಿಗೆ ಮರಳಲಿ: ಸಿಬಿಐ
ರೈತರ ದುರ್ದೆಸೆ: ಸದನಗಳ ಮುಂದೂಡಿಕೆ
ಮಾ.4: ರಾಜ್ಯಕ್ಕೆ ಚುನಾವಣಾ ಆಯೋಗ ಭೇಟಿ