ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಚಿವರ ಲೆಟರ್‌ಹೆಡ್ಡಲ್ಲೇ ರಾಜ್‌ಠಾಕ್ರೆಗೆ ಬೆದರಿಕೆ!
PTI
ತನ್ನನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿರುವ ಪತ್ರವೊಂದನ್ನು ಸ್ವೀಕರಿಸಿರುವುದಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್ಎಸ್) ಮುಖ್ಯಸ್ಥ ರಾಜ್‌ಠಾಕ್ರೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಅವರಿಗೆ ದೂರು ನೀಡಿದ್ದಾರೆ.

ಅಚ್ಚರಿಯೆಂಬಂತೆ, ಕೈಬರಹದಲ್ಲಿರುವ ಈ ಪತ್ರವನ್ನು, ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಆಧೀನದಲ್ಲಿ ಬರುವ ಸಾಮಾನ್ಯ ಆಡಳಿತ ಖಾತೆಯ ರಾಜ್ಯ ಸಚಿವರ ಲೆಟರ್‌ಹೆಡ್‌ನಲ್ಲಿ ಬರೆಯಲಾಗಿದ್ದು, ದಕ್ಷಿಣ ಕೇಂದ್ರ ಮುಂಬೈಯ ಶಿವಾಜಿ ಪಾರ್ಕ್ ನಿವಾಸಿಗಳು ಕಳುಹಿಸಿದ್ದಾರೆಂದು ಬಿಂಬಿಸಲಾಗಿದೆ.

ರಾಜ್ಯಸಚಿವರ ಮುದ್ರೆ ಹಾಗೂ ರಾಷ್ಟ್ರೀಯ ಲಾಂಛನ ಮತ್ತು ಸಚಿವಾಲಯದ ವಿಳಾಸವನ್ನು ಲೆಟರ್‌ಹೆಡ್ ಹೊಂದಿದೆ. ಇದನ್ನು ನಕಲಿ ಲೆಟರ್‌ಹೆಡ್ ಎಂದು ಎಂಎನ್ಎಸ್ ವಕ್ತಾರರು ಹೇಳಿದ್ದಾರಾದರೂ, ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದ್ದಾರೆ.

ಠಾಕ್ರೆಯ ಕಚೇರಿಗೆ ಈ ಪತ್ರ ಮಂಗಳವಾರ ಸಾಯಂಕಾಲ ತಲುಪಿದೆ. "ನಾವು ಯೋಜನೆಯ ಕುರಿತು ಈಗ ಸ್ಪಷ್ಟವಾಗಿದ್ದೇವೆ. ಮುಂಬೈ ಪೊಲೀಸರಿಗೆ ಸಾಧ್ಯವಿಲ್ಲದಿದ್ದರೆ, ಠಾಕ್ರೆ ತಲೆಗೆ ನಾವು ಗುಂಡುಗಳನ್ನು ಹಾರಿಸಲಿದ್ದೇವೆ" ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

ಶಿವಾಜಿಪಾರ್ಕ್ ನಿವಾಸಿಗಳ ಪರವಾಗಿ, ಅದ್ನಾನಿ ಹಾಗೂ ಡಿಸೋಜ ಎಂಬುದಾಗಿ ಸಹಿಮಾಡಲಾಗಿರುವ ಈ ಪತ್ರದಲ್ಲಿ, ರಾಜಕೀಯ ಸಮಾವೇಶಗಳು ಹಾಗೂ ಠಾಕ್ರೆಪಡೆಯ ಇತ್ತೀಚಿನ ಗಲಭೆಗಳು ಎಬ್ಬಿಸಿರುವ ತೊಂದರೆಗಳಿಂದ ಕಂಗೆಟ್ಟು ಹೋಗಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಹೇಳಲಾಗಿದೆ.

ಈ ತಿಂಗಳ ಆದಿಯಲ್ಲಿ ಎಂಎನ್ಎಸ್ ಹಾಗೂ ಸಮಾಜವಾದಿ ಪಕ್ಷಗಳ ಬೆಂಬಲಿಗರಿಂದ ನಡೆದ ಹಿಂಸಾಚಾರದಿಂದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿತ್ತು. ಠಾಕ್ರೆಯೂ ವಾಸ್ತವ್ಯ ಹೂಡಿರುವ ಶಿವಾಜಿಪಾರ್ಕಿನಲ್ಲಿ ವಾಸಿಸುತ್ತಿರುವ 850 ಕುಟುಂಬಗಳು ಈ ಗಲಭೆಗಳಿಂದಾಗಿ ಆಸ್ತಿ-ಸೊತ್ತುಗಳಿಗೆ ಉಂಟಾದ ಹಾನಿಯಿಂದಾಗಿ ಸಾಕಷ್ಟು ಕಷ್ಟ ಅನುಭವಿಸಿವೆ ಎಂದೂ ಪತ್ರದಲ್ಲಿ ಬರೆಯಲಾಗಿದೆ.

ಈ ಕುರಿತಂತೆ ಪಾಟೀಲ್ ಅವರಿಗೆ ಮುಖತ ಹಾಗೂ ಮೂರು ಪುಟಗಳ ದೂರು ನೀಡಿರುವ ಠಾಕ್ರೆ, ತನ್ನ ಜೀವಕ್ಕೆ ಬೆದರಿಕೆಗಳು ಹೆಚ್ಚುತ್ತಿದ್ದರೂ, ಪೊಲೀಸರು ತನಗೆ ನೀಡಲಾಗಿರುವ ಭದ್ರತೆಯನ್ನು ಹಿಂತೆಗೆದುಕೊಳ್ಳಲು ಯೋಜಿಸುತ್ತಿದ್ದಾರೆ ಎಂದು ದೂರಿದ್ದಾರೆ. ಅಲ್ಲದೆ ಮುಂಬೈ ಉಪ ಪೊಲೀಸ್ ಆಯುಕ್ತ ಕೆ.ಎಲ್.ಪ್ರಸಾದ್ ಅವರು ಎಂಎನ್ಎಸ್ ಕುರಿತಂತೆ ತಾರತಮ್ಯ ಧೋರಣೆ ಹೊಂದಿದ್ದಾರೆ ಎಂದೂ ಆಪಾದಿಸಿದ್ದಾರೆ.

ಆದರೆ, ಇದಕ್ಕೆ ಪ್ರತಿಕ್ರಿಯಿಸಲು, ಪ್ರಸಾದ್ ಅವರು ತಾನು ಊರಿನಲ್ಲಿಲ್ಲ ಎಂಬ ಕಾರಣ ನೀಡಿ ನಿರಾಕರಿಸಿದ್ದಾರೆ.
ಮತ್ತಷ್ಟು
ಹೆರಿಗೆಭತ್ಯೆ ವಿಸ್ತರಣೆ ಮಸೂದೆ ಅಂಗೀಕಾರ
ಸೇತುಸಮುದ್ರಂ ಅಫಿದಾವಿತ್ ಅಂಗೀಕಾರ
ರೈತರ ಸಮಸ್ಯೆ: ಮತ್ತೆ ಸದನಗಳ ಮುಂದೂಡಿಕೆ
ರೈಲಿನಡಿ ಸಿಲುಕಿ 16 ಮಂದಿ ದಾರುಣ ಸಾವು
ಜಸ್ಬೀರ್ ದೆಹಲಿಗೆ ಮರಳಲಿ: ಸಿಬಿಐ
ರೈತರ ದುರ್ದೆಸೆ: ಸದನಗಳ ಮುಂದೂಡಿಕೆ