ಪುರುಷರ ಪ್ರಾಬಲ್ಯದ ಗಡಿ ಭದ್ರತಾ ಪಡೆಗೆ ಇನ್ನು ಕೆಲವೇ ಕಾಲದೊಳಗೆ ಮಹಿಳಾ ಕಮಾಂಡೋಗಳು ಲಗ್ಗೆ ಇಡಲಿದ್ದಾರೆ. ಗಡಿ ಭದ್ರತಾ ಪಡೆಗೆ 750 ಮಹಿಳಾ ಪೇದೆಗಳನ್ನು ನೇಮಿಸಿಕೊಳ್ಳಲು ಸರಕಾರ ನಿರ್ಧರಿಸಿದ್ದು, ಗಡಿ ಕಾಯುವಿಕೆ ಕೆಲಸಕ್ಕೆ ಸದ್ಯವೇ ಮಹಿಳೆಯರ ಸೇರ್ಪಡೆಯಾಗಲಿದೆ.
2,10,261 ಸಿಬ್ಬಂದಿಯಿರುವ ಸುದೃಢ ಬಿಎಸ್‌ಎಫ್‌ಗೆ 750 ಮಹಿಳಾ ಪೇದೆಗಳ ನೇಮಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದ್ದು, ಬುಧವಾರ ಸಂಜೆ ಅಧಿಸೂಚನೆ ಹೊರಡಿಸಲಾಗಿದೆ. 750 ಮಂದಿ ಮಹಿಳಾ ಸಿಬ್ಬಂದಿಯಲ್ಲಿ 650 ಮಂದಿಯನ್ನು ಪಂಜಾಬ್ ಹಾಗೂ ಉಳಿದವರನ್ನು ಪಶ್ಚಿಮಬಂಗಾಳದಲ್ಲಿ ನಿಯೋಜಿಸಲಾಗುವುದು ಎಂದು ಬಿಎಸ್‌ಎಫ್ ಪ್ರಧಾನ ನಿರ್ದೇಶಕ ಎ.ಕೆ. ಮಿತ್ರಾ ವರದಿಗಾರರಿಗೆ ತಿಳಿಸಿದರು.
ಮಹಿಳೆಯರನ್ನು ಗಡಿಪ್ರದೇಶಗಳಲ್ಲಿ ನಿಯೋಜಿಸಲಾಗುವುದು ಎಂದು ತಿಳಿಸಿರುವ ಬಿಎಸ್‌ಎಫ್ ಅಧಿಕಾರಿ, ಗಡಿಯಾಚೆ ಮಹಿಳೆಯರ ಅತಿಕ್ರಮಣ ಮುಂತಾದ ಚಲನವಲನದ ಬಗ್ಗೆ ನಿಗಾವಹಿಸಲು ಇದರಿಂದ ಸಹಾಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
|