ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಸುಧಾರಣೆಗಳಿಂದ ಬಡವ ವಂಚಿತ : ಕಾರಟ್
ಕೇಂದ್ರದ ಯುಪಿಎ ಸರಕಾರದ ಆರ್ಥಿಕ ಧೋರಣೆಗಳನ್ನು ಕಟುವಾಗಿ ಖಂಡಿಸಿರುವ ಎಡಪಕ್ಷಗಳು ಸರಕಾರ ಕೈಗೆತ್ತಿಕೊಂಡಿರುವ ಆರ್ಥಿಕ ಸುಧಾರಣಾ ಪ್ರಕ್ರಿಯೆಗಳಿಂದ ದೇಶದ ಆರ್ಥಿಕ ಮೂಲಭೂತಕ್ಕೆ ಕೊಡಲಿ ಎಟು ಬೀಳುತ್ತಿದ್ದು ಬೆಳಗುತ್ತಿರುವ ಮತ್ತು ನರಳುತ್ತಿರುವ ಭಾರತಗಳ ನಡುವೆ ಅಂತರ ಹೆಚ್ಚಾಗುತ್ತಿದೆ ಎಂದು ಆಪಾದಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿಪಿಐ(ಎಂ) ಪಾಲಿಟ್ ಬ್ಯುರೋ ಸದಸ್ಯ ಸಿತಾರಾಮ್ ಯೆಚೂರಿ ಅವರು ಲೋಕಸಭೆಯಲ್ಲಿ ಮಂಡಿಸಲಾಗಿರುವ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಕೇವಲ ವಿದೇಶಿ ಬಂಡವಾಳ ಹೂಡಿಕೆಗೆ ಆದ್ಯತೆ ನೀಡಲಾಗಿದೆ, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಡಿಯಲ್ಲಿ ಆರ್ಥಿಕ ಸುಧಾರಣಾ ಪ್ರಕ್ರಿಯೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಆರ್ಥಿಕ ಸುಧಾರಣೆ ಪ್ರಕ್ರಿಯೆಗಳಿಂದ ಬಡವರು ಮತ್ತು ಬಲ್ಲಿದರ ನಡುವೆ ಅಂತರ ಹೆಚ್ಚುತ್ತಿದೆ ಎಂದು ಆಪಾದಿಸಿದ್ದಾರೆ.

ಭಾರತದ ಆರ್ಥಿಕ ಪ್ರಗತಿಯು ಏರು ಮುಖವಾಗಿದ್ದರೂ ಬೆಳಗುತ್ತಿರುವ ಮತ್ತು ನರಳುತ್ತಿರುವ ಭಾರತಗಳ ನಡುವಿನ ಅಂತರವನ್ನು ತೊಡೆದು ಹಾಕುವಲ್ಲಿ ಕೈಗೆತ್ತಿಕೊಳ್ಳಲಾಗಿರುವ ಆರ್ಥಿಕ ಸುಧಾರಣೆಗಳು ಸುದೀರ್ಘ ಕಾಲದವರೆಗೆ ಮುಂದುವರಿಯಲಾರವು ಎಂದು ಸಿಪಿಐ (ಎಂ) ನಾಯಕರು ಆಪಾದಿಸಿದ್ದಾರೆ.

ಆರ್ಥಿಕ ಮೂಲಭೂತ ಅಂಶಗಳು ಸದೃಡವಾಗಿಲ್ಲ ಎಂದು ಆರೋಪಿಸಿದ ಸಿಪಿಐ ನಾಯಕ ಗುರುದಾಸ್ ದಾಸ್‌ಗುಪ್ತಾ ಅವರು ಸುಧಾರಣಾ ಪ್ರಕ್ರಿಯೆಗಳು ಭಾರತಕ್ಕೆ ಆರ್ಥಿಕ ಸಬಲತೆಯನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.

ಕೃಷಿ ಮತ್ತು ಔದ್ಯಮಿಕ ವಲಯದ ಅಭಿವೃದ್ದಿಯು ಆರ್ಥಿಕ ಸಮೀಕ್ಷೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ಹೇಳಿರುವ ಅವರುಗಳು ದೇಶದ ತಲಾ ಆದಾಯ ಮತ್ತು ಉಪಭೋಗದಲ್ಲಿ ಇಳಿಕೆ ಕಂಡುಬಂದಿರುವುದನ್ನು ದೇಶದ ಆಂತರಿಕ ಉತ್ಪಾದನೆಯಲ್ಲಿ ಕಂಡು ಬಂದಿರುವ ಹಿಂಜರಿತವೇ ಎತ್ತಿ ತೋರಿಸುತ್ತಿದೆ ಎಂದು ಹೇಳಿದರು.
ಮತ್ತಷ್ಟು
ಅನುಕಂಪದ ಹುದ್ದೆ ಹಕ್ಕಲ್ಲ: ಸು.ಕೋ
ಗಡಿಭದ್ರತಾ ಪಡೆಗಿನ್ನು ಮಾನಿನಿಯರು
ಸಚಿವರ ಲೆಟರ್‌ಹೆಡ್ಡಲ್ಲೇ ರಾಜ್‌ಠಾಕ್ರೆಗೆ ಬೆದರಿಕೆ!
ಹೆರಿಗೆಭತ್ಯೆ ವಿಸ್ತರಣೆ ಮಸೂದೆ ಅಂಗೀಕಾರ
ಸೇತುಸಮುದ್ರಂ ಅಫಿದಾವಿತ್ ಅಂಗೀಕಾರ
ರೈತರ ಸಮಸ್ಯೆ: ಮತ್ತೆ ಸದನಗಳ ಮುಂದೂಡಿಕೆ