ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಧೈರ್ಯದಿಂದ ಅಣುಒಪ್ಪಂದ ನಿರ್ಧಾರಕ್ಕೆ ಬದ್ದರಾಗಿ
ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಕುರಿತಂತೆ ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳುವಂತೆ ಅಮೆರಿಕದ ಸಂಧಾನಕಾರ ನಿಕೋಲಸ್ ಬರ್ನ್ ತಿಳಿಸಿದ್ದಾರೆ.

ಪರಮಾಣು ಸರಬರಾಜು ಗುಂಪಿನಲ್ಲಿ ಅಮೆರಿಕ ದೇಶಕ್ಕೆ ಮಹತ್ವದ ಸ್ಥಾನವಿದ್ದು ಅಮೆರಿಕವನ್ನು ಹೊರತುಪಡಿಸಿ ಇತರ ದೇಶಗಳೊಂದಿಗೆ ನಾಗರಿಕ ಪರಮಾಣು ಒಪ್ಪಂದ ಸಾಧ್ಯವಿಲ್ಲ ಎಂದು ಬರ್ನ್ ತಿಳಿಸಿದ್ದಾರೆ.

ಅಮೆರಿಕದೊಂದಿಗೆ ನಾಗರಿಕ ಪರಮಾಣು ಒಪ್ಪಂದ ಸಾಧ್ಯವಿಲ್ಲ ಎನ್ನುವುದಾದರೆ ಅದು ಭಾರತ ಸರಕಾರಕ್ಕೆ ಬಿಟ್ಟ ವಿಷಯ ಎಂದು ಅಮೆರಿಕ ರಾಜಕೀಯ ವ್ಯವಹಾರಗಳ ಆಧೀನ ಕಾರ್ಯದರ್ಶಿ ಬರ್ನ್ ಹೇಳಿದ್ದಾರೆ.

ಭಾರತ ಅಮೆರಿಕವನ್ನು ಹೊರತುಪಡಿಸಿ ಇನ್ನಿತರ ದೇಶಗಳೊಂದಿಗೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಿದ್ದವಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಇತರ ದೇಶಗಳೊಂದಿಗೆ ಪರಮಾಣು ಒಪ್ಪಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ

ಅಣು ಒಪ್ಪಂದಕ್ಕೆ ನಿಗದಿಪಡಿಸಿದ ಅವಧಿ ಅಂತ್ಯವಾಗುತ್ತಿದ್ದು ಅಷ್ಟರಲ್ಲಿ ಭಾರತ ಸರಕಾರ ಪರಮಾಣು ಒಪ್ಪಂದ ಕುರಿತಂತೆ ಕೇಂದ್ರದಲ್ಲಿರುವ ಸಮ್ಮಿಶ್ರ ಸರಕಾರ ನಿರ್ಧಾರ ತೆಗೆದುಕೊಳ್ಳುವ ಭರವಸೆ ಇದೆ ಎಂದು ಬರ್ನ್ ಹೇಳಿದ್ದಾರೆ.

ಮತ್ತಷ್ಟು
ಆರ್ಥಿಕ ಸುಧಾರಣೆಗಳಿಂದ ಬಡವ ವಂಚಿತ : ಕಾರಟ್
ಅನುಕಂಪದ ಹುದ್ದೆ ಹಕ್ಕಲ್ಲ: ಸು.ಕೋ
ಗಡಿಭದ್ರತಾ ಪಡೆಗಿನ್ನು ಮಾನಿನಿಯರು
ಸಚಿವರ ಲೆಟರ್‌ಹೆಡ್ಡಲ್ಲೇ ರಾಜ್‌ಠಾಕ್ರೆಗೆ ಬೆದರಿಕೆ!
ಹೆರಿಗೆಭತ್ಯೆ ವಿಸ್ತರಣೆ ಮಸೂದೆ ಅಂಗೀಕಾರ
ಸೇತುಸಮುದ್ರಂ ಅಫಿದಾವಿತ್ ಅಂಗೀಕಾರ