ಲೋಕಸಭೆಯ ಚುನಾವಣೆಗಳು ನಿಗದಿತ ಅವಧಿಗಿಂತ ಮುಂಚೆ ನಡೆಯಲಿವೆ ಎನ್ನುವುದಕ್ಕೆ ಉತ್ತರಿಸಿದ ಸೋನಿಯಾ ಮುಂದಿನ ಚುನಾವಣಾ ಯುದ್ದದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಒಗ್ಗಟ್ಟಿನಿಂದ ಎದುರಿಸಲಿದೆ ಎಂದು ಹೇಳಿದರು
2008-09ರ ಸಾಲಿನ ಬಜೆಟ್ ಮಂಡನೆಯ ಪೂರ್ವಭಾವಿಯಾಗಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ ಮುಂಬರುವ ದಿನಗಳಲ್ಲಿ ಯುಪಿಎ ಸರಕಾರ ಒಗ್ಗಟ್ಟಿನಿಂದ ಇರಲಿದೆ ಎಂದು ಹೇಳಿದರು.
ಬಿಹಾರ್ ಕಾಂಗ್ರೆಸ್ನಲ್ಲಿ ಆರ್ಜೆಡಿ ಜೊತೆ ಮೈತ್ರಿ ಮಾಡಿಕೊಳ್ಳದೆ ಲೋಕಜನಶಕ್ತಿ, ಸಿಪಿಐ ಮತ್ತು ಎನ್ಸಿಪಿ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎನ್ನುವ ಪ್ರಸ್ತಾಪ ಮೊದಲಿನಿಂದಲೂ ಇದ್ದು ಆದರೆ ಲಾಲುಪ್ರಸಾದ್ ಯಾದವ್ ನೇತೃತ್ವದ ಪಕ್ಷ ಮೈತ್ರಿಗೆ ಸೂಕ್ತವಾಗಿದೆ ಎಂದು ಸೋನಿಯಾ ಹೇಳಿದ್ದಾರೆ.
ಲೋಕಸಭೆಯ ಅಧೀವೇಶನ ಆರಂಭವಾದಾಗಿನಿಂದ ವಿರೋಧ ಪಕ್ಷಗಳು ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿರುವುದರಿಂದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ
|