ನಾಗಾಲ್ಯಾಂಡ್ ಅಭಿವೃದ್ಧಿಗೆ ಹಿಂದೆ ನೀಡಿದ ವಾಗ್ದಾನಗಳನ್ನು ಮರೆತಿದ್ದರಿಂದ ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಧಾನಿ ಮನಮೋಹನ್‌ಸಿಂಗ್ ಅವರು ಪ್ರಚಾರ ಮಾಡುವ ಅಗತ್ಯವಿಲ್ಲ ಎಂದು ಬಿಜಿಪಿ ಕಿಡಿಕಾರಿದೆ.
ನಾಗಾಲ್ಯಾಂಡ್ ಅಭಿವೃದ್ಧಿಯ ಬಗ್ಗೆ ಶೂನ್ಯಭಾವನೆ ತಳೆದ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿದ್ದಾದರೂ ಎಕೆ? ಆಸ್ಸಾಂ ರಾಜ್ಯಸಭೆಯಿಂದ ಆಯ್ಕೆಯಾದರೂ ಆಸ್ಸಾಂ ಜನತೆಗೆ ನೀಡಿದ ಕೊಡುಗೆಯಾದರೂ ಎನು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಜುವೆಲ್ ಒರಾಮ್ ಪ್ರಶ್ನಿಸಿದರು.
ಮುಂಬರುವ ದಿನಗಳಲ್ಲಿ ಚುನಾವಣೆ ನಡೆಯಲಿದ್ದು ಚುನಾವಣೆ ಉದ್ದೇಶದಿಂದ ಪ್ರಧಾನಿ ನಾಗಾಲ್ಯಾಂಡ್ ರಾಜ್ಯಕ್ಕೆ ಭೇಟಿ ನೀಡಿರುವುದು ಸಾಬೀತಾಗಿದೆ ಎಂದು ಒರಾಮ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ದೇಶದ ಈಶಾನ್ಯ ರಾಜ್ಯಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂಇಲ್ಲಿಯವರೆಗೆ ಯಾವುದೇ ಮಹತ್ವ ನೀಡಿಲ್ಲ ಎಂದು ಅಪಾದಿಸಿದರು.
ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಕೋಮವಾದಿ ಪಕ್ಷವೆಂದು ಅಪಪ್ರಚಾರ ಮಾಡುತ್ತಿದೆ.ದೇಶದಾದ್ಯಂತ ಬಿಜೆಪಿಗೆ ಹೆಚ್ಚುತ್ತಿರುವ ಬೆಂಬಲದಿಂದಾಗಿ ಕಾಂಗ್ರೆಸ್ ಪಕ್ಷ ಅಸಹಾಯಕವಾಗಿದೆ ಎಂದು ಒರಾಮ್ ಟೀಕಿಸಿದ್ದಾರೆ.
|