ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ಬ್ಲಾಸ್ಟ್: ಮೆಮನ್‌ಗೆ ಮಧ್ಯಂತರ ಜಾಮೀನು
1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್‌ಸ್ಪೋಟ ಪ್ರಕರಣದ ಪ್ರಮುಖ ಆರೋಪಿಯಾದ ಯುಸೂಫ್ ಮೆಮನ್ ಸರ್ವೋಚ್ಚ ನ್ಯಾಯಾಲಯ ನಾಲ್ಕು ತಿಂಗಳ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ

ಆರೋಪಿಯ ಮಾನಸಿಕ ಅನಾರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮಧ್ಯಂತರ ಜಾಮೀನು ನೀಡಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಕಳೆದ ತಿಂಗಳು ಯೂಸೂಫ್ ಹಾಗೂ ರುಬೀನಾಳ ಜಾಮೀನು ಅರ್ಜಿಯನ್ನು ಅಪೆಕ್ಸ್ ನ್ಯಾಯಾಲಯ ತಿರಸ್ಕರಿಸಿತ್ತು.

ಆರೋಪಿ ಯೂಸೂಫ್ ಮಾನಸಿಕ ಚಿಕಿತ್ಸೆಗಾಗಿ ವೈದ್ಯರ ಮಂಡಳಿಯನ್ನು ರಚಿಸುವಂತೆ ಸರಕಾರಕ್ಕೆ ಆದೇಶಿಸಿದ್ದಲ್ಲದೇ ರೂಬಿನಾಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.

ಯೂಸೂಫ್ ಮಾನಸಿಕ ಸ್ಥಿತಿಯ ಕುರಿತಂತೆ ವೈದ್ಯಕೀಯ ಮಂಡಳಿ ನೀಡುವ ವರದಿಯ ಆಧಾರದ ಮೇಲೆ ಜಾಮೀನು ಅರ್ಜಿಯನ್ನು ಪರಿಗಣಿಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮುಂಬೈ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಯೂಸೂಫ್ ಹಾಗೂ ರುಬಿನಾಳಿಗೆ, ಸಂಚಿಗೆ ಸ್ಥಳಾವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಟಾಡಾ ನ್ಯಾಯಾಲಯ ಜೀವಾವಧಿಯನ್ನು ಶಿಕ್ಷೆಯನ್ನು ವಿಧಿಸಲಾಗಿದೆ.

1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಪೋಟದಲ್ಲಿ 257 ಮಂದಿ ದುರಂತದಲ್ಲಿ ಸಾವನ್ನಪ್ಪಿದ್ದು,574 ಮಂದಿ ಗಾಯಗೊಂಡಿದ್ದರು.ಟಾಡಾ ನ್ಯಾಯಾಲಯ ಈಗಾಗಲೇ ಪ್ರಕರಣದಲ್ಲಿ ಭಾಗಿಯಾದ 100 ಆರೋಪಿಗಳಿಗೆ ಟಾಡಾ ನ್ಯಾಯಾಲಯ ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದೆ.
ಮತ್ತಷ್ಟು
ಬಜೆಟ್ ಆಮ್ ಆದ್ಮಿ ಹಾಗೂ ರೈತರ ಮಿತ್ರ-ಪ್ರಧಾನಿ
ನಾಗಾಲ್ಯಾಂಡ್: ಪ್ರಧಾನಿ ಭೇಟಿಗೆ ಬಿಜೆಪಿ ಅಕ್ರೋಶ
ಯುಪಿಎ ಸರಕಾರದಲ್ಲಿ ಒಗ್ಗಟ್ಟಿದೆ-ಸೋನಿಯಾ
ಧೈರ್ಯದಿಂದ ಅಣುಒಪ್ಪಂದ ನಿರ್ಧಾರಕ್ಕೆ ಬದ್ದರಾಗಿ
ಆರ್ಥಿಕ ಸುಧಾರಣೆಗಳಿಂದ ಬಡವ ವಂಚಿತ : ಕಾರಟ್
ಅನುಕಂಪದ ಹುದ್ದೆ ಹಕ್ಕಲ್ಲ: ಸು.ಕೋ