ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿವಿಗಳು ವೃತ್ತಿಪರ ಶಿಕ್ಷಣ ನೀಡುವಂತಾಗಬೇಕು: ಪಾಟೀಲ್
PTI
ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ತಡೆಯಲು ವಿಶ್ವವಿದ್ಯಾನಿಲಯಗಳು ಉದ್ಯೋಗಾಧಾರಿತ ತರಗತಿಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಬೇಕು ಎಂದು ರಾಷ್ಚ್ರಪತಿ ಪ್ರತಿಭಾ ಪಾಟೀಲ್ ಶುಕ್ರವಾರ ಕರೆ ನೀಡಿದ್ದಾರೆ.

ಉದ್ಯೋಗ ಕಂಡುಕೊಳ್ಳುವಂತಹ ಕೌಶಲ್ಯಗಳನ್ನು ಒದಗಿಸುವುದು ಮತ್ತು ವೃತ್ತಿಪರ ತರಬೇತಿ ಅತೀ ಅಗತ್ಯವಾಗಿದೆ ಎಂದು ನುಡಿದ ಅವರು, ಇದನ್ನು ಸಮಗ್ರ ಶಿಕ್ಷಣ ಪ್ರಯತ್ನದ ಒಂದು ಅಂಗವಾಗಿ ನೋಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಕಲಿನ ಕ್ಯಾಂಪಸ್‌ನಲ್ಲಿ ವಿವಿಯ ಹೊಸ ಸಾಮುದಾಯಿಕ ಎಫ್ಎಂ ರೇಡಿಯೋ ಕೇಂದ್ರ ಮತ್ತು ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಪಾಟೀಲ್, ವಿಶ್ವವಿದ್ಯಾನಿಲಯಗಳು ಗ್ರಾಮೀಣ ಪ್ರದೇಶಗಳಲ್ಲಿರುವ ಸಂಸ್ಥೆಗಳಿಗೆ ಸಹಾಯ ನೀಡಲು ಜಾಲವನ್ನು ಸೃಷ್ಟಿಸಲು ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ನುಡಿದರು.

ಎಜುಸಾಟ್ ಉಪಗ್ರಹವು ದೂರಶಿಕ್ಷಣ ಮತ್ತು ಶೈಕ್ಷಣಿಕ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ವಿಶ್ವವಿದ್ಯಾನಿಯಗಳೊಳಗೆ ಸಂಪರ್ಕ ಜಾಲಗಳನ್ನು ಅಭಿವೃದ್ಧಿ ಪಡಿಸುವ ಹೊಸ ಸಾಧ್ಯತೆಗಳನ್ನು ನೀಡುತ್ತವೆ ಎಂದು ಅವರು ನುಡಿದರು.

ಇದೇ ವಿಶ್ವವಿದ್ಯಾನಿಲಯದ ಹಳೆವಿದ್ಯಾರ್ಥಿನಿಯಾಗಿರುವ ಪಾಟೀಲರನ್ನು ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಸನ್ಮಾನಿಸಿದರು.
ಮತ್ತಷ್ಟು
ಬಿಗ್ ಬಿ ಕಚೇರಿ ಮೇಲೆ ದಾಳಿ
ಉಗ್ರರ ಅಡಗುತಾಣದ ಮೇಲೆ ದಾಳಿ:ಶಸ್ತ್ರಾಸ್ತ್ರ ವಶ
ಮುಂಬೈ ಬ್ಲಾಸ್ಟ್: ಮೆಮನ್‌ಗೆ ಮಧ್ಯಂತರ ಜಾಮೀನು
ಬಜೆಟ್ ಆಮ್ ಆದ್ಮಿ ಹಾಗೂ ರೈತರ ಮಿತ್ರ-ಪ್ರಧಾನಿ
ನಾಗಾಲ್ಯಾಂಡ್: ಪ್ರಧಾನಿ ಭೇಟಿಗೆ ಬಿಜೆಪಿ ಅಕ್ರೋಶ
ಯುಪಿಎ ಸರಕಾರದಲ್ಲಿ ಒಗ್ಗಟ್ಟಿದೆ-ಸೋನಿಯಾ