ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾತ್ಯತೀತ ಪಕ್ಷಗಳು ಒಂದಾಗಲು ಬರ್ದಾನ್ ಕರೆ
ಮತೀಯ ಶಕ್ತಿಗಳು ಅಧಿಕಾರಕ್ಕೆ ಬರುವುದನ್ನು ತಡೆಗಟ್ಟಲು ಎಲ್ಲಾ ಜಾತ್ಯಾತೀತ ಪಕ್ಷಗಳು ಒಂದೇ ವೇದಿಕೆಯಡಿ ಬರಬೇಕು ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ.ಬರ್ದಾನ್ ಹೇಳಿದ್ದಾರೆ.

ಇಲ್ಲಿ ನಾಲ್ಕುದಿನಗಳ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಮತೀಯ ಶಕ್ತಿಗಳು ಸವಾಲೊಡ್ಡುತ್ತಿವೆ ಎಂಬ ಎಚ್ಚರಿಕೆ ನೀಡಿದರು.

"ಭಾರತೀಯ ಜನತಾ ಪಕ್ಷದಲ್ಲಿ ಪ್ರಧಾನ ಮಂತ್ರಿಯೊಬ್ಬರು ಕಾಯುತ್ತಿದ್ದಾರೆ. ಅವರು ಕಾಯುತ್ತಲೇ ಇರಬೇಕಾಗುತ್ತದೆ. ತಮಿಳ್ನಾಡಿನಲ್ಲಿಯೂ ಸಹ ಎಐಎಡಿಎಂಕೆ ನಾಯಕಿ ಜಯಲಲಿತ ಬಿಜೆಪಿಯ ಸನಿಹಕ್ಕೆ ಸಾಗುತ್ತಿದ್ದಾರೆ. ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಮತೀಯ ಶಕ್ತಿಗಳು ಅಧಿಕಾರಕ್ಕೆ ಬರುವುದನ್ನು ತಡೆಯಲು ಜಾತ್ಯತೀತ ಶಕ್ತಿಗಳು ಒಂದಾಗಬೇಕು" ಎಂದು ಬರ್ದನ್ ನುಡಿದರು.

ಇವರೆಲ್ಲ ಜನತೆಯ ನಂಬುಗೆಯನ್ನು ಮತಗಳಾಗಿ ಪರಿವರ್ತಿಸಲು ಕಾಯುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಮತ್ತಷ್ಟು
ವಿವಿಗಳು ವೃತ್ತಿಪರ ಶಿಕ್ಷಣ ನೀಡುವಂತಾಗಬೇಕು: ಪಾಟೀಲ್
ಬಿಗ್ ಬಿ ಕಚೇರಿ ಮೇಲೆ ದಾಳಿ
ಉಗ್ರರ ಅಡಗುತಾಣದ ಮೇಲೆ ದಾಳಿ:ಶಸ್ತ್ರಾಸ್ತ್ರ ವಶ
ಮುಂಬೈ ಬ್ಲಾಸ್ಟ್: ಮೆಮನ್‌ಗೆ ಮಧ್ಯಂತರ ಜಾಮೀನು
ಬಜೆಟ್ ಆಮ್ ಆದ್ಮಿ ಹಾಗೂ ರೈತರ ಮಿತ್ರ-ಪ್ರಧಾನಿ
ನಾಗಾಲ್ಯಾಂಡ್: ಪ್ರಧಾನಿ ಭೇಟಿಗೆ ಬಿಜೆಪಿ ಅಕ್ರೋಶ