ಅಮೆರಿಕ ವಿದೇಶಾಂಗ ಇಲಾಖೆಯ ಮಾಜಿ ಉಪಕಾರ್ಯದರ್ಶಿ ಸ್ಟ್ರೋಬ್ ಟಾಲ್ಬೋಟ್ ಅವರು, ಭಾರತ-ಅಮೆರಿಕ ಅಣುಒಪ್ಪಂದವನ್ನು ಇದೀಗ ವಿರೋಧಿಸುತ್ತಿರುವ ಬಿಜೆಪಿಯು, ಅಧಿಕಾರದಿಂದ ಕೆಳಗಿಳಿಯುವ ಅಲ್ಪಕಾಲಕ್ಕೆ ಮುನ್ನ ಅಂತಿಮಗೊಳಿಸಲು ಇಚ್ಛಿಸಿತ್ತು ಎಂಬ ಹೇಳಿಕೆಗೆ ಬಲವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಟಾಲ್ಬೋಟ್ ಹೇಳಿಕೆಯನ್ನು ಅಲ್ಲಗಳೆದಿದೆ.
ಪೋಕ್ರಾನ್‌ನಲ್ಲಿ ಭಾರತವು 1998ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಆಗಿನ ಸಚಿವ ಜಸ್ವಂತ್ ಸಿಂಗ್ ಅವರೊಂದಿಗೆ ಎರಡು ವರ್ಷಗಳ ಕಾಲದ ಸುದೀರ್ಘ ಮಾತುಕತೆ ನಡೆಸಿದ್ದರು. ಟಾಲ್ಬೋಟ್, ಅಣ್ವಸ್ತ್ರ ಪ್ರಸರಣ ಲಾಬಿಯಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದಾರೆ.
ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಅವರನ್ನು ಭೇಟಿ ನಡೆಸಿ, ಭಾರತದ ಅಣು ಸ್ವಾಯತ್ತತೆಗೆ ಅಡ್ಡಿಯಾಗುವ ಕಾರಣ ತಾವು ಈ ಒಪ್ಪಂದವನ್ನು ವಿರೋಧಿಸುವುದಾಗಿ ಹೇಳಿರುವ ಕೆಲವೇ ದಿನಗಳ ಬಳಿಕೆ ಟಾಲ್ಬೋಟ್ ಹೇಳಿಕೆ ಹೊರಬಿದ್ದಿದೆ.
|