ಮೇಘಾಲಯದ ಮತದಾರರ ಸಂಖ್ಯೆಯಲ್ಲಿ ಮಹಿಳೆಯರದ್ದು ಮೇಲ್ಗೈ. ಆದರೆ ಅಲ್ಲಿ ಚುನಾವಣೆಗೆ ಸ್ಫರ್ಧಿಸುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಭಾರೀ ಕಮ್ಮಿ.
ಮಾರ್ಚ್ ಮೂರರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ಫರ್ಧಿಸುತ್ತಿರುವ ಮಹಿಳೆಯರ ಸಂಖ್ಯೆ ಕೇವಲ 30. ಒಟ್ಟು 331 ಅಭ್ಯರ್ಥಿಗಳಲ್ಲಿ ಇವರ ಪಾಲು ಕೇವಲ ಆರು ಶೇಕಡಾ.
ಇದ್ದುದರಲ್ಲಿ ಲೋಕ ಜನಶಕ್ತಿ ಪಕ್ಷವು ಗರಿಷ್ಠ ಸಂಖ್ಯೆಯ ಮಹಿಳೆಯರನ್ನು ಚುನಾವಣಾ ಕಣಕ್ಕಿಳಿಸಿದೆ. ಇದರ ಒಟ್ಟು 18 ಮಂದಿಯಲ್ಲಿ ನಾಲ್ವರು ಮಹಿಳೆಯರು.
ಕಾಂಗ್ರೆಸ್‌ನ 60 ಅಭ್ಯರ್ಥಿಗಳಲ್ಲಿ ಮೂವರು ಮಹಿಳೆಯರು. ಬಿಜೆಪಿ ಒಬ್ಬ ಹಾಗೂ ಎನ್‌ಸಿಪಿ ಇಬ್ಬರು ಮಹಿಳೆಯರನ್ನು ಚುನಾವಣಾ ಕಣದಲ್ಲಿ ಬಿಟ್ಟಿದೆ. ಚುನಾವಣೆಯಲ್ಲಿ ಸ್ಫರ್ಧಿಸಲು ಮಹಿಳೆಯರು ಮುಂದೆ ಬರದಿರುವುದೇ ಈ ಕೊರತೆಗೆ ಕಾರಣ ಎಂದು ಎಲ್ಲಾ ಪಕ್ಷಗಳ ವಕ್ತಾರರು ಹೇಳಿದ್ದಾರೆ.
ಮೇಘಾಲಯದಲ್ಲಿ 6,25,545 ಮಹಿಳಾ ಮತದಾರರಿದ್ದರೆ, ಪುರುಷ ಮತದಾರರ ಸಂಖ್ಯೆ 6,04,607. ಪ್ರಸ್ತುತ ಅಸ್ಸೆಂಬ್ಲಿಯಲ್ಲಿರುವ ಮಹಿಳಾ ಮತದಾರರ ಸಂಖ್ಯೆ ಕೇವಲ ಮೂರು.
|