ಕೇಂದ್ರ ಸರಕಾರದ ಬಜೆಟ್‌ನಲ್ಲಿ ಘೋಷಿಸಲಾಗಿರುವ ರೈತರ ಸಾಲಮನ್ನಾದಿಂದಾಗಿ ಗ್ರಾಮೀಣ ಬ್ಯಾಂಕುಗಳು ಮುಚ್ಚುಗಡೆಯಾಗಲಿದ್ದು, ಪರಿಣಾಮ ಖಾಸಗೀ ಲೇವಾದೇವಿಯವರು ಇದರ ಲಾಭಪಡೆದು ಇನ್ನಷ್ಟು ಸದೃಢರಾಗಲಿದ್ದಾರೆ ಎಂದು ಸಿಪಿಐ ಹೇಳಿದೆ.
ಇಲ್ಲಿಗೆ 50 ಕಿ.ಮೀ ದೂರದಲ್ಲಿರುವ ಪುದುಕೊಟ್ಟೈಯಲ್ಲಿ ಪಕ್ಷದ ನಾಲ್ಕು ದಿನಗಳ ರಾಜ್ಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ. ಬರ್ದನ್ ಅವರು ಹಣಕಾಸು ಸಚಿವರು ಕೃಷಿ ಸಾಲಗಳ ಬಡ್ಡಿ ಕಡಿತ ಮಾಡಬೇಕು ಎಂದು ಹೇಳಿದ್ದಾರಲ್ಲದೆ, 'ಸಾಲ ಪರಿಹಾರ ಆಯೋಗ'ವನ್ನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
|