ವಿರೋಧ ಪಕ್ಷಗಳಿಂದ ಚುನಾವಣಾ ಪ್ರಣಾಳಿಕೆ ಎಂದು ಕರೆಸಿಕೊಂಡಿರುವ ಕೇಂದ್ರ ಸರಕಾರದ ಬಜೆಟ್‌ನಲ್ಲಿನ ರೈತಸಾಲ ಮನ್ನಾ ಹಾಗೂ ಇತರ ಅನುಕೂಲಗಳ ಹೆಸರನ್ನು ಪಡೆದುಕೊಳ್ಳಲು ಯುಪಿಎಯಲ್ಲಿ ವಸ್ತುಶಃ ಸ್ಫರ್ಧೆ ಉಂಟಾಗಿದೆ.
ರೈತಸಾಲ ಮನ್ನಾ ಘೋಷಣೆಯು ಸಂಸತ್ತಿನಲ್ಲಿ ಆದೊಡನೆಯೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದೆದುರು ಸಾವಿರಾರು ಮಂದಿ ರೈತರು ಜಮಾಯಿಸಿ ಕೃತಜ್ಞತೆ ಸಲ್ಲಿಸಿದರು.
ಬಜೆಟ್ ಮಂಡನೆಯ ಮರುದಿನ ಶನಿವಾರ ನಂ.10 ಜನಪಥದ ಹೊರಗಡೆ ಸಂತೋಷಾಚರಣೆಗಳು ಮುಂದುವರಿದಿದ್ದರೆ, ಕೆಲವು ಪತ್ರಿಕೆಗಳಲ್ಲಿ ಕೃಷಿಸಚಿವ ಶರದ್ ಪವಾರ್ ಅವರ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪೂರ್ಣಪುಟ ಜಾಹೀರಾತುಗಳು ಪ್ರಕಟವಾಗಿದ್ದು, ಕೃಷಿ ಸಾಲಮನ್ನಾದ ಭರವಸೆ ಪೂರ್ಣಗೊಂಡಿದೆ ಎಂದು ಪ್ರಕಟಿಸಲಾಗಿದೆ.
ಪವಾರ್ ಕಾಂಗ್ರೆಸ್‌ನಿಂದ ದೂರಸರಿದ ಬಳಿಕ 1978ರಲ್ಲಿ ಪಿಡಿಎಫ್ ಸರಕಾರವು ಮಹಾರಾಷ್ಟ್ರದಲ್ಲಿ ಪ್ರಥಮವಾಗಿ ಸಾಲ ರಿಯಾಯಿತಿ ಘೋಷಿಸಿತ್ತು ಎಂದು ಜಾಹೀರಾತಿನಲ್ಲಿ ಹೇಳಲಾಗಿದ್ದು, ತಾನು ರೈತರ ನಾಡಿಬಡಿತವನ್ನು ಹೇಗೆ ಅರ್ಥಮಾಡಿಕೊಳ್ಳುತ್ತೇನೆ ಎಂದು ಶರದ್ ಹೇಳುವಂತೆ ಬಿಂಬಿಸಲಾಗಿದೆ.
ಈ ಜಾಹೀರಾತಿನಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಅವರ ಛಾಯಾಚಿತ್ರಗಳನ್ನೂ ಪ್ರಕಟಿಸಲಾಗಿದ್ದು, ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಗಿದೆ.
ಏತನ್ಮಧ್ಯೆ, ಆರ್‌ಜೆಡಿಯು ಈ ಬಜೆಟ್ ಒಂದು ದೀಪಸ್ತಂಭ ಎಂದು ಬಣ್ಣಿಸಿದೆ. ಇದು ಯುಪಿಎಗೆ ಮುಂದಿನ ದಿನಗಳಿಗೆ ದಾರಿ ದೀಪವಾಗಲಿದೆ ಎಂದು ಹೇಳಿದ್ದು, ಇದರ ಕ್ರೆಡಿಟ್ ಮುಖ್ಯವಾಗಿ ಸೋನಿಯಾ ಗಾಂಧಿ, ಶರದ್ ಪವಾರ್ ಹಾಗೂ ಲಾಲೂ ಪ್ರಸಾದ್ ಯಾದವ್‌ಗೆ ಸಲ್ಲಬೇಕು ಎಂದು ಹೇಳಿದೆ. ಪ್ರಸಾದ್ ಅವರ, 'ಎಲ್ಲರನ್ನೂ ಸಂತುಷ್ಟಗೊಳಿಸುವ' ರೈಲ್ವೆ ಬಜೆಟ್ ಮೈತ್ರಿಕೂಟದ ಮುಂದಿನ ಹಾದಿಯನ್ನು ರೂಪಿಸಿದೆ ಎಂದು ಆರ್‌ಜೆಡಿ ಹೇಳಿದೆ.
|