ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಿಡ್ನಿಕಾಂಡಕ್ಕೆ ಹಿರಿಯ ಉ. ಪ್ರದೇಶ ಅಧಿಕಾರಿ ಬಲಿ
ಬಹುಕೋಟಿ ಮತ್ತು ಬಹು ರಾಜ್ಯಗಳಲ್ಲಿ ಹರಡಿದ ಅಕ್ರಮ ಕಿಡ್ನಿ ಕಸಿ ಪ್ರಕರಣದಲ್ಲಿ ಉತ್ತರ ಪ್ರದೇಶದ ಸಚಿವ ಸಂಪುಟದ ಕಾರ್ಯದರ್ಶಿ ಶಶಾಂಕ ಶೇಖರ್ ಅವರು ಆರೋಪಿ ಎಂದು ಸಾಬೀತಾಗಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಮಾಯಾವತಿ ಅವರು ಸಚಿವ ಸಂಪುಟ ಕಾರ್ಯದರ್ಶಿಯನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದಾರೆ.

ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ಸಮಾನವಾಗಿರುವ ಹುದ್ದೆಯಲ್ಲಿ ಶೇಖರ್ ಇನ್ನು ಮುಂದೆ ಮುಂದುವರಿಯುವುದಿಲ್ಲ. ಉತ್ತರ ಪ್ರದೇಶ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಅವರನ್ನು ಸಚಿವಾಲಯದ ಮುಖ್ಯ ಆಡಳಿತಾಧಿಕಾರಿ ಹುದ್ದೆಯಿಂದ ಮುಕ್ತಗೊಳಿಸಲಾಗಿದೆ.

ಕಿಡ್ನಿ ಕಸಿ ಪ್ರಕರಣದಲ್ಲಿ ಆರೋಪಿಯಾಗಿರುವ ಡಾ. ಉಪೇಂದ್ರ ಅಗರವಾಲ್ ಪೊಲೀಸ್ ವಿಚಾರಣೆಯಲ್ಲಿ ನೋಯಿಡಾದಲ್ಲಿರುವ ಶಶಾಂಕ್ ಮಾಲೀಕತ್ವದ ಮನೆಯನ್ನು ಅಕ್ರಮವಾಗಿ ಕಿಡ್ನಿ ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ. ಕಿಡ್ನಿ ಕಾಂಡದ ನಿಷ್ಪಕ್ಷಪಾತ ವಿಚಾರಣೆಗೆ ಅನುವಾಗುವಂತೆ ಶಶಾಂಕ್ ಶೇಖರ್ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಸಮಾಜವಾದಿ ಪಕ್ಷ ಆಗ್ರಹಿಸಿದ್ದು, ವಿರೋಧ ಪಕ್ಷದ ಒತ್ತಾಯದ ಹಿನ್ನಲೆಯಲ್ಲಿ ಶಶಾಂಕ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ನಿರ್ಧಾರವನ್ನು ಮಾಯಾವತಿ ಸರಕಾರ ತೆಗೆದುಕೊಂಡಿದೆ.

ಮುಖ್ಯಮಂತ್ರಿ ಮಾಯಾವತಿ ಅವರಿಗೆ ಶಶಾಂಕ್ ಅವರು ಬರೆದಿರುವ ಪತ್ರದಲ್ಲಿ ತಮ್ಮನ್ನು ಕ್ಯಾಬಿನೆಟ್ ಸಚಿವ ಸ್ಥಾನದ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು ಎಂದು ಕೇಳಿಕೊಂಡಿದ್ದು ಅವರ ವಿನಂತಿಯ ಪ್ರಕಾರ ಸಚಿವ ಸ್ಥಾನದಿಂದ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಯಾವತಿ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಮತ್ತಷ್ಟು
ಸಾಲಮನ್ನಾದ ಕ್ರೆಡಿಟ್ ಪಡೆಯಲು ಸ್ಫರ್ಧೆ!
ಸಾಲಪರಿಹಾರ ಆಯೋಗಕ್ಕೆ ಸಿಪಿಐ ಕರೆ
ಮಹಿಳಾ ಮತದಾರರು ಹೆಚ್ಚು, ಅಭ್ಯರ್ಥಿಗಳು ಕಡಿಮೆ
ಟಾಲ್ಬೋಟ್ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ
ಜಾತ್ಯತೀತ ಪಕ್ಷಗಳು ಒಂದಾಗಲು ಬರ್ದಾನ್ ಕರೆ
ವಿವಿಗಳು ವೃತ್ತಿಪರ ಶಿಕ್ಷಣ ನೀಡುವಂತಾಗಬೇಕು: ಪಾಟೀಲ್