ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇಘಾಲಯದಲ್ಲಿ ಮತದಾನ ಆರಂಭ
ಮೇಘಾಲಯ ವಿಧಾನಸಭಾ ಚುವಾವಣೆ ನಡೆಯುತ್ತಿದ್ದು, ಬಿಗಿ ಭದ್ರತೆಯಲ್ಲಿ ಮುಂಜಾನೆ ಏಳು ಗಂಟೆಗೆ ಮತದಾನ ಆರಂಭವಾಗಿದೆ. ಮೇಘಾಲಯ ವಿಧಾನ ಸಭೆಯ 60 ಸ್ಥಾನಗಳಲ್ಲಿ 59 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸಂಗ್ಮಾ ಅವರ ಮರಣದಿಂದಾಗಿ ಬಾಗ್ಮಾರ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ.

ಮೇಘಾಲಯದಲ್ಲಿ ಒಟ್ಟು 12,32,907 ಮತದಾರರಿದ್ದು ಇವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಮೇಘಾಲಯದಲ್ಲಿ ಪುರಷ ಮತದಾರರಿಗಿಂತ 20 ಸಾವಿರ ಮಹಿಳಾ ಮತದಾರರು ಹೆಚ್ಚಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಡಿ.ಡಿ.ಲಪಾಗ್, ಪುರ್ನೊ ಎ ಸಂಗಮಸಿ ಮಾರಕ್, ಇ.ಕೆ.ಮಾವ್ಲಾಂಗ್, ಎಫ್.ಎ.ಕೊಂಗಲಾಮ್ ಮತ್ತು ಜೆ.ಡಿ.ರಿಂಬಾಯ್ ಅವರು ಚುನಾವಣಾ ಕಣದಲ್ಲಿದ್ದಾರೆ.

ಇಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದ್ದರೂ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಕೇವಲ 30. ಒಟ್ಟು 331 ಅಭ್ಯರ್ಥಿಗಳಲ್ಲಿ ಇವರ ಪಾಲು ಕೇವಲ ಆರು ಶೇಕಡಾ. ಇದ್ದುದರಲ್ಲಿ ಲೋಕ ಜನಶಕ್ತಿ ಪಕ್ಷವು ಗರಿಷ್ಠ ಸಂಖ್ಯೆಯ ಮಹಿಳೆಯರನ್ನು ಚುನಾವಣಾ ಕಣಕ್ಕಿಳಿಸಿದೆ. ಇದರ ಒಟ್ಟು 18 ಮಂದಿಯಲ್ಲಿ ನಾಲ್ವರು ಮಹಿಳೆಯರು.

ಕಾಂಗ್ರೆಸ್‌ನ 60 ಅಭ್ಯರ್ಥಿಗಳಲ್ಲಿ ಮೂವರು ಮಹಿಳೆಯರು. ಬಿಜೆಪಿ ಒಬ್ಬ ಹಾಗೂ ಎನ್‌ಸಿಪಿ ಇಬ್ಬರು ಮಹಿಳೆಯರನ್ನು ಚುನಾವಣಾ ಕಣದಲ್ಲಿ ಬಿಟ್ಟಿದೆ. ಚುನಾವಣೆಯಲ್ಲಿ ಸ್ಫರ್ಧಿಸಲು ಮಹಿಳೆಯರು ಮುಂದೆ ಬರದಿರುವುದೇ ಈ ಕೊರತೆಗೆ ಕಾರಣ ಎಂದು ಎಲ್ಲಾ ಪಕ್ಷಗಳ ವಕ್ತಾರರು ಹೇಳಿದ್ದಾರೆ.

ಮೇಘಾಲಯದಲ್ಲಿ 6,25,545 ಮಹಿಳಾ ಮತದಾರರಿದ್ದರೆ, ಪುರುಷ ಮತದಾರರ ಸಂಖ್ಯೆ 6,04,607. ಪ್ರಸ್ತುತ ಅಸ್ಸೆಂಬ್ಲಿಯಲ್ಲಿರುವ ಮಹಿಳಾ ಮತದಾರರ ಸಂಖ್ಯೆ ಕೇವಲ ಮೂರು.
ಮತ್ತಷ್ಟು
ಕಿಡ್ನಿಕಾಂಡಕ್ಕೆ ಹಿರಿಯ ಉ. ಪ್ರದೇಶ ಅಧಿಕಾರಿ ಬಲಿ
ಸಾಲಮನ್ನಾದ ಕ್ರೆಡಿಟ್ ಪಡೆಯಲು ಸ್ಫರ್ಧೆ!
ಸಾಲಪರಿಹಾರ ಆಯೋಗಕ್ಕೆ ಸಿಪಿಐ ಕರೆ
ಮಹಿಳಾ ಮತದಾರರು ಹೆಚ್ಚು, ಅಭ್ಯರ್ಥಿಗಳು ಕಡಿಮೆ
ಟಾಲ್ಬೋಟ್ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ
ಜಾತ್ಯತೀತ ಪಕ್ಷಗಳು ಒಂದಾಗಲು ಬರ್ದಾನ್ ಕರೆ