ಜುಲೈ ಮುಂಚಿತವಾಗಿ ಅಣುಒಪ್ಪಂದಕ್ಕೆ ಭಾರತ ಸಹಿಹಾಕುವಂತಾಗಲು ಅಮೆರಿಕ ಬ್ಲಾಕ್‌ಮೇಲ್ ತಂತ್ರ ಅನುಸರಿಸುತ್ತಿದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ.ಬರ್ದಾನ್ ಹೇಳಿದ್ದಾರೆ.
ಈ ಹಿಂದೆ ಒತ್ತಡದ ತಂತ್ರ ಅನುಸರಿಸಿದ್ದ, ಅಮೆರಿಕ ಇದೀಗ, ರಷ್ಯ ಹಾಗೂ ಇತರ ರಾಷ್ಟ್ರಗಳೊಂದಿಗಿನ ಅಣುಕಾರ್ಯಕ್ರಮಕ್ಕೆ ತಡೆಯೊಡ್ಡವ ಬೆದರಿಕೆಯೊಡ್ಡುವ ಮೂಲಕ ಬ್ಲಾಕ್‌ಮೇಲ್ ತಂತ್ರ ಅನುಸರಿಸುತ್ತಿದೆ ಎಂದು ಸಿಪಿಐನ 20ನೆ ರಾಜ್ಯಾ ಸಮ್ಮೇಳನದಲ್ಲಿ ಮಾತನಾಡುತ್ತಾ ನುಡಿದರು.
ನಿಕೋಲಸ್ ಬರ್ನ್ಸ್, ರಾಬರ್ಟ್ ಗೇಟ್ಸ್ ಅಂತಹ ಹಿರಿಯ ಅಮೆರಿಕ ಅಧಿಕಾರಿಗಳು ಮತ್ತು ರಾಜತಾಂತ್ರಿಕರು 123 ಒಪ್ಪಂದದ ಕುರಿತು ಸರಕಾರದ ಮೇಲೆ ಒತ್ತಡ ಹೇರಲು ಈ ಹಿಂದೆ ಭಾರತಕ್ಕೆ ಆಗಮಿಸಿದ್ದರು. ಇದೀಗ ಈ ಒಪ್ಪಂದಕ್ಕೆ ಭಾರತ ಸಹಿಹಾಕದಿದ್ದರೆ, ರಷ್ಯಾ ಹಾಗೂ ಫ್ರಾನ್ಸ್ ಜತೆಗಿನ ಭಾರತದ ವ್ಯವಹಾರಗಳಿಗೆ ತಡೆ ಒಡ್ಡುವುದಾಗಿ ಅಮೆರಿಕ ಬೆದರಿಕೆಯೊಡ್ಡುತ್ತಿದೆ ಎಂದು ಅವರು ಹೇಳಿದರು.
|