ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವಾಗ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ರೈತರ ದುರ್ದೆಸೆ ನೆನಪಾಗಿದೆ ಎಂದು ದೂರಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ, ಬಿಎಸ್‌ಪಿ ವರಿಷ್ಠೆ ಮಾಯಾವತಿ, ಕೇಂದ್ರದ ರೈತಸಾಲ ಮನ್ನಾ ಕ್ರಮವನ್ನು ಟೀಕಿಸಿದ್ದಾರೆ.
ಸಮಾವೇಶ ಒಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮಾಯಾವತಿ, ಕೇಂದ್ರ ಸರಕಾರವು ತನ್ನ ಪ್ರಥಮ ಬಜೆಟ್‌ನಲ್ಲೇ ರೈತರ ಸಾಲ ಮನ್ನಾ ಮಾಡುತ್ತಿದ್ದರೆ, ಈ ಹೊತ್ತಿಗೆ ಅವರಿಗೆ ಬಹಳಷ್ಟು ಅನುಕೂಲವಾಗುತ್ತಿತ್ತು ಎಂದು ಹೇಳಿದ್ದಾರೆ.
ರೈತರ ಸಾಲವನ್ನು ಹೇಗೆ ಮನ್ನಾ ಮಾಡಲಾಗುವುದು ಮತ್ತು, ಈ ಹಣವು ಅವರಿಗೆ ಯಾವಾಗ ತಲುಪಲಿದೆ ಎಂಬುದನ್ನು ಬಜೆಟ್‌ನಲ್ಲಿ ವಿವರಿಸಲಾಗಿಲ್ಲ ಎಂದು ಬೆಟ್ಟುಮಾಡಿದ ಮಾಯಾವತಿ, ಲೇವಾದೇವಿ ವ್ಯವಹಾರಗಾರರಿಂದ ಸಾಲಪಡೆದ ರೈತರಿಗೆ ಕೇಂದ್ರ ಯಾವುದೇ ಸವಲತ್ತುಗಳನ್ನು ಒದಗಿಸಿಲ್ಲ ಎಂದು ಹೇಳಿದರು. 46 ಶೇಕಡಾ ರೈತರು ಲೇವಾದೇವಿಗಾರರಿಂದ ಸಾಲಪಡೆದಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
|