ಸೋಮವಾರ ನಡೆದ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಶೇ75 ರಷ್ಟು ಮತದಾನವಾಗಿದೆ. 60 ಸ್ಥಾನಗಳ 59 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಮಧ್ಯಾಹ್ನದ ವೇಳೆಗೆ 45 ಶೇಕಡಾ ಮತದಾರರು ತಮ್ಮ ಪರಮೋಚ್ಛ ಹಕ್ಕನ್ನು ಚಲಾಯಿಸಿದ್ದರು. ಆದರೆ, ಬಳಿಕ ಮತದಾನ ಚುರುಕುಗೊಂಡಿತು.
ರಾಜ್ಯದ ಹಲವೆಡೆ ಶೀತಗಾಳಿ ಹಾಗೂ ಮಳೆ ಸುರಿದ ಕಾರಣ ಕೆಲಹೊತ್ತು ಮತದಾನಕ್ಕೆ ಅಡಚಣೆಯುಂಟಾಯಿತು.
ರಿ-ಬೋಯಿ ಜಿಲ್ಲೆಯ ನೋಂಗ್‌ಪೋದಲ್ಲಿ ಮುಖ್ಯಮಂತ್ರಿ ಡಿ.ಡಿ.ಲಾಪಂಗ್ ಮತಚಲಾಯಿಸಿದರು. ಎನ್‌ಸಿಪಿ ನಾಯಕ ಪುರ್ನೊ ಎ ಸಂಗ್ಮಾ ತುರಾದಲ್ಲಿ ಮತದಾನ ಮಾಡಿದರು. ಮುಂಜಾನೆ ಏಳು ಗಂಟೆಗೆ ಬಿಗಿ ಭದ್ರತೆಯೊಂದಿಗೆ ಮತದಾನ ಆರಂಭಗೊಂಡಿತು.
|