ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಲಮನ್ನಾ ವಿರುದ್ಧ ಅರ್ಜಿಯ ವಿಚಾರಣೆಗೆ ಸು.ಕೋ ನಕಾರ
ಯಾವ ಆಧಾರದಲ್ಲಿ ಕೇಂದ್ರ ಸರಕಾರವು 60 ಸಾವಿರ ಕೋಟಿ ರೂಪಾಯಿ ರೈತರ ಸಾಲಮನ್ನಾ ಮಾಡಲು ಮುಂದಾಗಿದೆ ಎಂಬುದಾಗಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಶೀಘ್ರ ವಿಚಾರಣೆ ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಇದು ಬಜೆಟ್ ಪ್ರಸ್ತಾಪ. ಈ ವಿಚಾರವು ಸಂಸತ್ತಿನ ಮುಂದಿದೆ. ಸಂಸತ್ತಿನಲ್ಲಿ ಚರ್ಚಿತವಾಗುವ ವಿಚಾರಕ್ಕೆ ಸಂಬಧಿಸಿದಂತೆ ಚರ್ಚಿಸಲು ಇಚ್ಚಿಸುವುದಿಲ್ಲ ಎಂಬುದಾಗಿ ಮುಖ್ಯ ನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಅವರ ನೇತೃತ್ವದ ನ್ಯಾಯಪೀಠ ಅರ್ಜಿಯ ಶೀಘ್ರ ವಿಚಾರಣೆಗೆ ನಿರಾಕರಿಸುತ್ತಾ ಹೇಳಿದೆ.

ಅರ್ಜಿಸಲ್ಲಿಸಿದ ವಕೀಲ ಎಂ.ಎಸ್ ಶರ್ಮಾ ಅವರು ಶೀಘ್ರ ವಿಚಾರಣೆಗೆ ವಿನಂತಿಸಿದಾಗ, "ಶೀಘ್ರ ವಿಚಾರಣೆ ನಡೆಸುವುದಿಲ್ಲ. ನೀವು ಸೂಕ್ತ ವೇದಿಕೆಗೆ ತೆರಳಬಹುದು" ಎಂದು ಹೇಳಿದ ನ್ಯಾಯಪೀಠ, ಅರ್ಜಿದಾರರಿಗೆ ಶೀಘ್ರವಿಚಾರಣೆ ಬೇಕಿದ್ದಲ್ಲಿ ಅವರು ಸಂಸತ್ತಿನ ಸದಸ್ಯರಾಗಬಹುದು ಎಂಬ ಹಾಸ್ಯಚಟಾಕಿ ಹಾರಿಸಿತು.
ಮತ್ತಷ್ಟು
ಮೇಘಾಲಯ: 75ಶೇ ಮತದಾನ
ಸದನವೊಂದು ತಮಾಷೆಯ ಸ್ಥಳವಾಗುತ್ತಿದೆ: ಚಟರ್ಜಿ
ಕೋಲಾಹಲಕ್ಕೆ ಕಾರಣರಾದ 'ಉತ್ತರ ಭಾರತೀಯರು'
ಚುನಾವಣೆ ವೇಳೆಗೆ ರೈತರ ನೆನಪು: ಮಾಯಾ ಟೀಕೆ
ಅಣುವಿಚಾರದಲ್ಲಿ ಅಮೆರಿಕ ಬ್ಲಾಕ್‌ಮೇಲ್ ಮಾಡುತ್ತಿದೆ: ಬರ್ದಾನ್
ಮೇಘಾಲಯದಲ್ಲಿ ಮತದಾನ ಆರಂಭ