ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಂಧ್ರ: 19 ಟಿಆರ್‍ಎಸ್ ಸದಸ್ಯರ ರಾಜೀನಾಮೆ
ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ.ಚಂದ್ರಶೇಖರ ರಾವ್ ತನ್ನ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಒಂದು ದಿವಸದ ಬಳಿಕ, ಪಕ್ಷದ 16 ವಿಧಾನ ಸಭಾ ಸದಸ್ಯರು ಮತ್ತು ಮೂರು ವಿಧಾನ ಪರಿಷತ್ ಸದಸ್ಯರು ಮಂಗಳವಾರ ಆಂಧ್ರ ವಿಧಾಸಭೆಗೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡುವಲ್ಲಿ ಅನವಶ್ಯ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಟಿಆರ್ಎಸ್, ಇದನ್ನು ಪ್ರತಿಭಟಿಸಿ ರಾಜೀನಾಮೆ ನೀಡಿರುವುದಾಗಿ ಹೇಳಿದೆ.

ಕಾಂಗ್ರೆಸ್ ತೆಲಂಗಾಣಕ್ಕೆ ಕೈಕೊಟ್ಟಿದೆ ಎಂದು ದೂರಿರುವ 16 ಶಾಸಕರು ತಮ್ಮ ರಾಜೀನಾಮೆ ಪತ್ರವನ್ನು ವಿಧಾನ ಸಭಾ ಸ್ಪೀಕರ್ ಕೆ.ಅರ್ ಸುರೇಶ್ ರೆಡ್ಡಿ ಅವರಿಗೆ ನೀಡಿದ್ದರೆ, ಮೂವರು ಮೇಲ್ಮನೆ ಸದಸ್ಯರು ವಿಧಾನ ಮಂಡಳಿ ಅಧ್ಯಕ್ಷ ಕೆ. ಚಕ್ರಪಾಣಿಯವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಮತ್ತಷ್ಟು
ಪರೀಕ್ಷೆಯ ಗುಮ್ಮ: ಗುಂಡಿಕ್ಕಿಕೊಂಡ ವಿದ್ಯಾರ್ಥಿನಿ
ಮರುಜೀವ(ನ) ಪಡೆದ ಕಾಶ್ಮೀರ್ ಸಿಂಗ್!
ಕಾಶ್ಮೀರ್ ಸಿಂಗ್ ಇಂದು ಸ್ವದೇಶಕ್ಕೆ
ಸಾಲಮನ್ನಾ ವಿರುದ್ಧ ಅರ್ಜಿಯ ವಿಚಾರಣೆಗೆ ಸು.ಕೋ ನಕಾರ
ಮೇಘಾಲಯ: 75ಶೇ ಮತದಾನ
ಸದನವೊಂದು ತಮಾಷೆಯ ಸ್ಥಳವಾಗುತ್ತಿದೆ: ಚಟರ್ಜಿ